Friday, August 21, 2026

BDA Apartments

Home Front Page ದೇವೇಗೌಡರಿಗೆ ನಾಯಕರನ್ನ ಬೆಳೆಸೋದು ಗೊತ್ತು: ತುಳಿಯೋ ಅಭ್ಯಾಸವಿಲ್ಲ-ಸಂಸದ ಪ್ರತಾಪ್ ಸಿಂಹ ಟಾಂಗ್.

ದೇವೇಗೌಡರಿಗೆ ನಾಯಕರನ್ನ ಬೆಳೆಸೋದು ಗೊತ್ತು: ತುಳಿಯೋ ಅಭ್ಯಾಸವಿಲ್ಲ-ಸಂಸದ ಪ್ರತಾಪ್ ಸಿಂಹ ಟಾಂಗ್.

ಮೈಸೂರು, ಏಪ್ರಿಲ್,3, 2024 (www.justkannada.in): ಹೆಚ್.ಡಿ ದೇವೇಗೌಡರು ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿಸಿದರು ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ವೆಂಕಟೇಶ್ ಗೆ ಸ್ವತಃ ಸಂಸದ ಪ್ರತಾಪ್ ಸಿಂಹ ಅವರೇ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ನನಗೆ ಟಿಕೆಟ್ ಕೊಡಿಸಲು ಹೆಚ್.ಡಿ ದೇವೇಗೌಡರು ಪ್ರಯತ್ನಿಸಿದರು. ದೇವೇಗೌಡರಿಗೆ ನಾಯಕರನ್ನ ಬೆಳಿಸಿ ಗೊತ್ತು. ದೇವೇಗೌಡರಿಗೆ ಯಾರನ್ನೂ ತುಳಿದು ಅಭ್ಯಾಸವಿಲ್ಲ. ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ ಎಂದು ಕಿಡಿಕಾರಿದರು.

ನಿಮ್ಮನ್ನು ರಾಜಕೀಯವಾಗಿ ಬೆಳೆಸಿದ್ದು ದೇವೇಗೌಡರು. ದೇವೇಗೌಡರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

Key words: HD DeveGowda, leaders, Pratap Simha