Wednesday, September 30, 2026

BDA Apartments

ಕೋಲಾರ ‘ಕೈ’ ಅಭ್ಯರ್ಥಿ ಫೈನಲ್: ಕೆ.ಗೌತಮ್ ಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್ BDA JK_...
Home Front Page ಕೋಲಾರ  ‘ಕೈ’ ಅಭ್ಯರ್ಥಿ ಫೈನಲ್: ಕೆ.ಗೌತಮ್ ಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್.

ಕೋಲಾರ  ‘ಕೈ’ ಅಭ್ಯರ್ಥಿ ಫೈನಲ್: ಕೆ.ಗೌತಮ್ ಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್.

ಕೋಲಾರ,ಮಾರ್ಚ್,30,2024 (www.justkannada.in): ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಗೆ ಕಗ್ಗಂಟಾಗಿದ್ದ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನ ಕೊನೆಗೂ ಫೈನಲ್ ಮಾಡಿದ್ದು, ಕೆ.ಗೌತಮ್ ಗೆ ಟಿಕೆಟ್ ನೀಡಿದೆ.

ಹೌದು ಕೋಲಾರ ಕ್ಷೇತ್ರದ  ಕಾಂಗ್ರೆಸ್ ಟಿಕೆಟ್ ಗಾಗಿ ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವೆ ನಡೆದ ತಿಕ್ಕಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಫುಲ್ ಸ್ಟಾಪ್ ಇಟ್ಟಿದ್ದು ಈ ಎರಡು ಬಣ ಬಿಟ್ಟು ಅಚ್ಚರಿ ಅಭ್ಯರ್ಥಿಯನ್ನ ಆಯ್ಕೆ ಮಾಡಿದೆ.ಕೋಲಾರ ‘ಕೈ’ ಅಭ್ಯರ್ಥಿ ಫೈನಲ್ congress congress 4

ಸಚಿವ ಕೆ.ಎಚ್ ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದರು. ಆದರೆ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವುದನ್ನ ವಿರೋಧಿಸಿ ಕಾಂಗ್ರೆಸ್ ಐವರು ಶಾಸಕರು ಸಿಡಿದೆದ್ದು ರಾಜೀನಾಮೆಗೆ ಮುಂದಾಗಿದ್ದರು. ನಂತರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದು ಭಿನ್ನಮತ ಶಮನಗೊಳಿಸಿದ್ದರು.

ಇದೀಗ ಕೆಎಚ್ ಮುನಿಯಪ್ಪ ಬಣ ಮತ್ತು ರಮೇಶ್ ಕುಮಾರ್ ಬಣ ಬಿಟ್ಟು ಕೆ.ಗೌತಮ್ ಅವರನ್ನ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.

Key words: Kolar, congress, candidate, K. Gautam