Friday, August 21, 2026

BDA Apartments

Home Front Page ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷ ರೂ.ಗೂ ಅಧಿಕ ಹಣ ವಶಕ್ಕೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷ ರೂ.ಗೂ ಅಧಿಕ ಹಣ ವಶಕ್ಕೆ.

ಚಾಮರಾಜನಗರ,ಮಾರ್ಚ್,29,2024 (www.justkannada.in): ದಾಖಲೆ ಇಲ್ಲದೆ ಸಾಗಾಣೆ ಮಾಡುತ್ತಿದ್ದ 4 ಲಕ್ಷಕ್ಕೂ ಅಧಿಕ ನಗದನ್ನು ಪೊಲೀಸರು  ವಶಕ್ಕೆ ಪಡೆದಿದದ್ದಾರೆ.

ಗುಂಡ್ಲುಪೇಟೆ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ಪೊಲೀಸರು  ಕೆಕ್ಕನಹಳ್ಳ ಮತ್ತು ಮದ್ದೂರು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪೀಯ ಕೆಕ್ಕನಹಳ್ಳ  ಮದ್ದೂರು ವಲಯದ ಕೇರಳ ಸುಲ್ತಾನ್ ಭತ್ತೇರಿ ರಸ್ತೆಯ ಮದ್ದೂರು ಚೆಕ್ ಪೋಸ್ಟ್ ನಲ್ಲಿ  ವಶಕ್ಕೆ ಪಡೆಯಲಾಗಿದೆ.  ಕೇರಳದಿಂದ ದಾಖಲೆಯಿಲ್ಲದೆ 4 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸಾಗಾಣೆ ಮಾಡುತ್ತಿದ್ದರು ಎನ್ನಲಾಗಿದೆ.  ಲೋಕಸಭಾ ಚುನಾವಣೆ ಹಿನ್ನೆಲೆ, ಚೆಕ್ ಪೋಸ್ಟ್ ಗಳಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗಿದೆ.

Key words: Check Post, money, seized