Friday, August 14, 2026

BDA Apartments

Home Front Page ಮಂಡ್ಯಕ್ಕೆ ಅದ್ಭುತ ನಾಯಕ ಬೇಕು, ಅದು ಕುಮಾರಣ್ಣ ಮಾತ್ರ- ಶಾಸಕ ಅಶ್ವಥ್ ನಾರಾಯಣ್.

ಮಂಡ್ಯಕ್ಕೆ ಅದ್ಭುತ ನಾಯಕ ಬೇಕು, ಅದು ಕುಮಾರಣ್ಣ ಮಾತ್ರ- ಶಾಸಕ ಅಶ್ವಥ್ ನಾರಾಯಣ್.

ಮಂಡ್ಯ, ಮಾರ್ಚ್,28, 2024 (www.justkannada.in):  ಮಂಡ್ಯಕ್ಕೆ ಅದ್ಭುತ ನಾಯಕ ಬೇಕು.  ಅದು ಕುಮಾರಣ್ಣ ಮಾತ್ರ. ಹೆಚ್.ಡಿ ಕುಮಾರಸ್ವಾಮಿ ಅವರನ್ನ ಗೆಲ್ಲಿಸುವಂತೆ ಶಾಸಕ ಸಿ.ಎನ್ ಅಶ್ವತ್ ನಾರಾಯಣ್ ಕರೆ ನೀಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದ್ದು ಇಂದು ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಶ್ವಥ್ ನಾರಾಯಣ್,ಕಾಂಗ್ರೆಸ್ ನವರು ದುಡ್ಡು ಇರುವವರನ್ನ ಕರೆದುಕೊಂಡು ಬರುತ್ತಾರೆ.  ನಮ್ಮ ಶತ್ರು ಯಾರು ಅಂದರೆ ಕಾಂಗ್ರೆಸ್.  ಹೆಚ್.ಡಿ ಕುಮಾರಸ್ವಾಮಿಯನ್ನ ಗೆಲ್ಲಿಸಲು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.

ಕುಮಾರಸ್ವಾಮಿ ವಿಜಯೇಂದ್ರ ಇಬ್ಬರನ್ನು ಅಣ್ಣ ತಮ್ಮನ ರೀತಿ ನೋಡಬೇಕು. ಕುಮಾರಸ್ವಾಮಿ ಕೇವಲ ಕೆಲವು ಭಾಗಕ್ಕೆ ಮಾತ್ರ ಸೀಮಿತವಲ್ಲ. 28 ಕ್ಷೇತ್ರಗಳನ್ನ ಗೆಲ್ಲಬೇಕು.  ಹಾಗಾಗಿ ಎಲ್ಲಾ ಕ್ಷೇತ್ರಕ್ಕೂ ಹೋಗುತ್ತಾರೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.

Key words: Mandya – HD Kumaraswamy- MLA- Ashwath Narayan.