Tuesday, August 18, 2026

BDA Apartments

Home Front Page ನೂತನ ಕಾನೂನು ಸಲಹಾ ಕೇಂದ್ರಕ್ಕೆ ನ್ಯಾ. ಸಂಜೀವ್ ಖಾನ್ಹ ಚಾಲನೆ.

ನೂತನ ಕಾನೂನು ಸಲಹಾ ಕೇಂದ್ರಕ್ಕೆ ನ್ಯಾ. ಸಂಜೀವ್ ಖಾನ್ಹ ಚಾಲನೆ.

ಬೆಂಗಳೂರು ಗ್ರಾಮಾಂತರ,ಮಾರ್ಚ್,25,2024(www.justkannada.in): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಾಲಿಗೆ ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನೂತನ ಕಾನೂನು ಸಲಹಾ ಕೇಂದ್ರಕ್ಕೆ ನ್ಯಾಯಮೂರ್ತಿ ಸಂಜೀವ್ ಖಾನ್ಹ ಅವರು ಚಾಲನೆ ನೀಡಿದರು.

ಚಾಲನೆ ಬಳಿಕ ನ್ಯಾ. ಸಂಜೀವ್ ಖಾನ್ಹ ಅವರು,  ಉಚಿತ ಕಾನೂನು ನೆರವು ಬಗ್ಗೆ ಗ್ರಾಮಸ್ಥರಿಗೆ ಕಾನೂನು ಜಾಗೃತಿ ಮೂಡಿಸಿ ರಾಷ್ಟ್ರೀಯ ಕಾನೂನು ‌ಸೇವೆ ಬಗ್ಗೆ ಜನರ ಜೊತೆಗೆ ಮುಕ್ತವಾಗಿ ಸಮಾಲೋಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ  ಡಾ.ಎನ್ ಶಿವಶಂಕರ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ. ಎನ್, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ್ ಸಾಲಿಯಾನ, ಉಪವಿಭಾಗಾಧಿಕಾರಿ ಎ.ಸಿ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ ಕೆ ರಮೇಶ್, ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ,  ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು  ಜಾಲಿಗೆ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಗಳು, ಗ್ರಾಮಸ್ಥರು  ಉಪಸ್ಥಿತರಿದ್ದರು.

Key words: Bangalore-  new -legal advisory center Judge-Sanjeev Khan.