Friday, September 18, 2026

BDA Apartments

Home Front Page ನಿಮಗೆ ಟಿಕೆಟ್ ಕೈ ತಪ್ಪಲು ಕಾರಣ ಏನೆಂದು ಜನರಿಗೆ ತಿಳಿಸಿ- ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದ...

ನಿಮಗೆ ಟಿಕೆಟ್ ಕೈ ತಪ್ಪಲು ಕಾರಣ ಏನೆಂದು ಜನರಿಗೆ ತಿಳಿಸಿ- ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದ ‘ಕೈ’ ಅಭ್ಯರ್ಥಿ ಎಂ.ಲಕ್ಷ್ಮಣ್.

ಮೈಸೂರು,ಮಾರ್ಚ್,22,2024(www.justkannada.in): ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ಅವರೇ ನಿಮಗೆ ಟಿಕೆಟ್ ಕೈ ತಪ್ಪಲು ಕಾರಣ ಏನೆಂದು ಜನರಿಗೆ ತಿಳಿಸಿ ಎಂದು ಸವಾಲು ಹಾಕಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ್ ಕಣಕ್ಕಿಳಿಯುತ್ತಿದ್ದು ಈ ನಡುವೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದ ಅವರು, ನೀವು ಸುದ್ದಿಗೋಷ್ಠಿ ನಡೆಸುವ ವೇಳೆ ನಿಮಗೊಂದು ಫೋನ್ ಬರುತ್ತೆ. ಹತ್ತು ನಿಮಿಷಗಳ ರಹಸ್ಯವಾಗಿ ಮಾತನಾಡಿ ಬರುತ್ತೀರಾ. ಅದಾದ ನಂತರ ನಿಮ್ಮ ಮಾತಿನ ದಾಟಿ ಬದಲಾಗುತ್ತೆ. ನಿಮ್ಮ ಪರ ನಡೆಯುತ್ತಿದ್ದ ಪ್ರತಿಭಟನೆಗಳೆಲ್ಲಾ ನಿಂತು ಹೋಗುತ್ತವೆ. ಇದಕ್ಕೆ ಏನು ಕಾರಣ, ಯಾರದ್ದು ಆ ಕರೆ ಅದರ ಬಗ್ಗೆ ಮಾಹಿತಿ ಕೊಡಿ. ನಿಮಗೆ ಟಿಕೆಟ್ ಕೈ ತಪ್ಪಲು ಕಾರಣ ಏನೆಂದು ಜನರಿಗೆ ತಿಳಿಸಿ ಎಂದರು.ನಿಮಗೆ ಟಿಕೆಟ್ ಕೈ ತಪ್ಪಲು ಕಾರಣ ಏನೆಂದು ಜನರಿಗೆ ತಿಳಿಸಿ laxman

ಯದುವೀರ್ ರನ್ನ ಬೀದಿಗೆ ಕರೆ ತಂದು ನಾಟಕ ಆಡಿಸ್ತಿದ್ದಾರೆ.  ಯದುವೀರ್ ರನ್ನ ಬೀದಿಲಿ ಕೂರಿಸಿ ಟೀ ಕುಡಿಸೋದು. ಈ ರೀತಿ ಮಾಡುವ ಮೂಲಕ ನಾಟಕ ಮಾಡಿಸುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು.

Key words: mysore-kodagu-MP-Pratap simha-Congress candidate-M.Laxman