Sunday, September 20, 2026

BDA Apartments

ಬಿಎಸ್ ವೈ ಮೇಲೆ ನನ್ನ ಅಸಮಾಧಾನ: ಸೋಮಣ್ಣ ಗೆಲುವು ಕಷ್ಟ ಎಂದ ಮಾಜಿ ಸಚಿವ ಮಾಧುಸ್...
Home Front Page ಬಿಎಸ್ ವೈ ಮೇಲೆ ನನ್ನ ಅಸಮಾಧಾನ: ಸೋಮಣ್ಣ ಗೆಲುವು ಕಷ್ಟ ಎಂದ ಮಾಜಿ ಸಚಿವ ಮಾಧುಸ್ವಾಮಿ.

ಬಿಎಸ್ ವೈ ಮೇಲೆ ನನ್ನ ಅಸಮಾಧಾನ: ಸೋಮಣ್ಣ ಗೆಲುವು ಕಷ್ಟ ಎಂದ ಮಾಜಿ ಸಚಿವ ಮಾಧುಸ್ವಾಮಿ.

ತುಮಕೂರು,ಮಾರ್ಚ್,20,2024(www.justkannada.in):  ತುಮಕೂರು ಕ್ಷೇತ್ರದಿಂದ  ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಸೋಮಣ್ಣ ಗೆಲುವು ಕಷ್ಟ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಧುಸ್ವಾಮಿ, ಸೋಮಣ್ಣ ಮೇಲೆ ನನಗೆ ಯಾವುದೇ ಬೇಜಾರಿಲ್ಲ. ಬಿ. ಎಸ್  ಯಡಿಯೂರಪ್ಪ ಮೇಲೆ ನನ್ನ ಅಸಮಾಧಾನ.  ಬಿಎಸ್ ವೈ ನನ್ನ ಜೊತೆ ಮಾತನಾಡುವ ಸೌಜನ್ಯ ತೋರಲಿಲ್ಲ. ನಾವು ದುಡ್ಡಲ್ಲಿ ರಾಜಕಾರಣ ಮಾಡುವವರಲ್ಲ. ತುಮಕೂರಿನಲ್ಲಿ ಹೊರಗಿನವರಿಗೆ ಟಿಕೆಟ್ ಕೊಟ್ಟದ್ದಕ್ಕೆ ನನ್ನ ಒಪ್ಪಿಗೆ ಇಲ್ಲ.  ಹೊರಗಿನವರಿಗೆ ತುಮಕೂರು ಟಿಕೆಟ್ ನೀಡಬಾರದಿತ್ತು ಎಲ್ಲದಕ್ಕೂ  ಬಿಎಸ್ ವೈ ಅವರೇ ಉತ್ತರಿಸಬೇಕು ಎಂದರು.ಬಿಎಸ್ ವೈ ಮೇಲೆ ನನ್ನ ಅಸಮಾಧಾನ madhu

ತುಮಕೂರಿನಲ್ಲಿ ಸೋಮಣ್ಣ ಗೆಲುವು ಕಷ್ಟ. ತುಮಕೂರು ಗ್ರಾ. ಕ್ಷೇತ್ರದಲ್ಲಿ ಸೋಮಣ್ಣಗೆ ಲೀಡ್ ಕೊಡಿಸಲಿ.  ಸುರೇಶ್ ಗೌಡಗೆ ಸವಾಲು ಹಾಕುವೆ  ಎಂದ ಮಾಧುಸ್ವಾಮಿ ಅವರು, ರಾಜಣ್ಣ  ಬೆಂಬಲದಿಂದ ಗೆದ್ದೆ ಎಂದು ಬಸವರಾಜು ಹೇಳಿದ್ದಾರೆ. ಆದರೆ  ರಾಜಣ್ಣ ಈಗ ಕಾಂಗ್ರೆಸ್ ಪರ ಗಟ್ಟಿಯಾಗಿ ನಿಂತಿದ್ದಾರೆ.   ಇಂಥ ಪರಿಸ್ಥಿತಿಯಲ್ಲಿ ಸೋಮಣ್ಣ ಹೇಗೆ ಗೆಲ್ತಾರೆ ಎಂದು ಪ್ರಶ್ನಿಸಿದರು.

ತುಮಕೂರಿನಲ್ಲಿ ನನಗೆ ಅನ್ಯಾಯವಾಗಿದೆ ಇನ್ನೆರೆಡು ದಿನಗಳಲ್ಲಿ ನನ್ನ ತೀರ್ಮಾನ ಹೇಳುತ್ತೇನೆ. ಕಾರ್ಯಕರ್ತರು ಏನು ಹೇಳ್ತಾರೆ ಕೇಳಿ ಹೇಳುತ್ತೇನೆ. ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ತೀರ್ಮಾನ ತೆಗೆದುಕೊಂಡವರು ನನ್ನ ಜೊತೆ ಮಾತನಾಡಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

Key words: tumakur-Former Minister-Madhuswamy- Somanna-victory – difficult.