Thursday, October 8, 2026

BDA Apartments

Home Front Page 2008ರಲ್ಲಿ ಬಿಎಸ್ ವೈ ಸಿಎಂ ಆಗಿದ್ದಕ್ಕೆ ಜಿ.ಎಂ ಸಿದ್ದೇಶ್ವರ್ ಕಾರಣ-ಆರ್.ಅಶೋಕ್.

2008ರಲ್ಲಿ ಬಿಎಸ್ ವೈ ಸಿಎಂ ಆಗಿದ್ದಕ್ಕೆ ಜಿ.ಎಂ ಸಿದ್ದೇಶ್ವರ್ ಕಾರಣ-ಆರ್.ಅಶೋಕ್.

ದಾವಣಗೆರೆ,ಮಾರ್ಚ್,15,2024(www.justkannada.in): 2008ರಲ್ಲಿ  ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ಜಿ.ಎಂ ಸಿದ್ದೇಶ್ವರ್ ಕಾರಣ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಜಿ.ಎಂ ಸಿದ್ದೇಶ್ವರ್,  ಕಾಂಗ್ರೆಸ್ ಸರ್ಕಾರ ನೀರಿನ ಮೇಲೆ ಗುಳ್ಳೆ ಇದ್ದಂತೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗುತ್ತಾರೆ. ನಾಳೆ ದಾವಣಗೆರೆಯಲ್ಲೂ ಪಾಕಿಸ್ತಾನ್ ಜಿಂದಾಬಾದ್ ಅಂತಾ ಕೂಗಬಾರದು ಅಂದರೇ ಬಿಜೆಪಿ ಗೆಲ್ಲಿಸಿ ಎಂದು ಕರೆ ನೀಡಿದರು.2008ರಲ್ಲಿ ಬಿಎಸ್ ವೈ ಸಿಎಂ ಆಗಿದ್ದಕ್ಕೆ ಜಿ.ಎಂ ಸಿದ್ದೇಶ್ವರ್ ಕಾರಣ-ಆರ್.ಅಶೋಕ್ ashok

2008ರಲ್ಲಿ ಬಿಎಸ್ ವೈ ಸಿಎಂ ಆಗಲು ಸಿದ್ದೇಶ್ವರ್ ಕಾರಣ  2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು 3 ಸ್ಥಾನಗಳ ಕೊರತೆ ಇತ್ತು. ಈ ವೇಳೆ ವೆಂಕಯ್ಯ  ನಾಯ್ಡು ನನಗೆ ಫೋನ್ ಮಾಡಿ ಮೂವರು ಶಾಸಕರು ಬೇಕೆಂದು ಆದೇಶಿಸಿದ್ದರು. ಆಗ ನಾನು ಸಂಸದ ಜಿ.ಎಂ ಸಿದ್ದೇಶ್ವರ್ ಅವರಿಗೆ ಫೋನ್ ಮಾಡಿದೆ. ಆಗ ಜಿ.ಎಂ ಸಿದ್ದೇಶ್ವರ್ ಇಬ್ಬರು ಪಕ್ಷೇತರರನ್ನ ಕರೆತಂದರು.  ಸಿದ್ದೇಶ್ವರ್ ಇಲ್ಲದಿದ್ದರೇ  ಅಂದು 2008ರಲ್ಲಿ ಬಿಎಸ್ ವೈ ಸಿಎಂ ಆಗುತ್ತಿರಲಿಲ್ಲ ಎಂದು ಆರ್.ಅಶೋಕ್ ಹೇಳಿದರು.

Key words: GM Siddeshwar – 2008- CM – BSY – R.Ashok.