Saturday, August 8, 2026

BDA Apartments

Home Front Page ನೀರು ಪೂರೈಸುವಲ್ಲಿ ವಿಫಲ: ಸರ್ಕಾರದ ವಿರುದ್ದ ಕೊಡ ಹಿಡಿದು ಬಿಜೆಪಿ ವಿಭಿನ್ನ ಪ್ರತಿಭಟನೆ.

ನೀರು ಪೂರೈಸುವಲ್ಲಿ ವಿಫಲ: ಸರ್ಕಾರದ ವಿರುದ್ದ ಕೊಡ ಹಿಡಿದು ಬಿಜೆಪಿ ವಿಭಿನ್ನ ಪ್ರತಿಭಟನೆ.

ಬೆಂಗಳೂರು,ಮಾರ್ಚ್,12,2024(www.justkannada.in): ಬೆಂಗಳೂರಿಗೆ ನೀರು ಪೂರೈಸುವಲ್ಲಿ ರಾಜ್ಯಸರ್ಕಾರ ವಿಫಲ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ದ ಫ್ರೀಡಂ ಪಾರ್ಕ್ ನಲ್ಲಿ ಖಾಲಿ ಕೊಡ ಹಿಡಿದು ಬಿಜೆಪಿ ವಿಭಿನ್ನ ಪ್ರತಿಭಟನೆ ನಡೆಸಿತು. ನೀರಿಲ್ಲ ನೀರಿಲ್ಲ ಎಂದು ಭಜನೆ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ದ ಧರಣಿ ನಡೆಸಿದರು.

ಬರಗಾಲ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು  ಕುದುರೆ ಗಾಡಿ ಮೇಲೆ ಖಾಲಿ ಟ್ಯಾಂಕ್ ಇಟ್ಟು  ಬಿಜೆಪಿ ಪ್ರತಿಭಟನೆ ನಡೆಸಿದ್ದು, ಎಂಎಲ್ ಸಿ ರವಿಕುಮಾರ್ ಸೇರಿ ಹಲವರು ಭಾಗಿಯಾಗಿದ್ದರು.

Key words: Failure – supply –water- BJP – different- protest –against- Govt.