Sunday, August 23, 2026

BDA Apartments

Home Front Page ಎಸ್ ಬಿಐ ಅರ್ಜಿ ವಜಾ: ಚುನಾವಣಾ ಬಾಂಡ್ ಗಳ ಬಗ್ಗೆ ನಾಳೆಯೊಳಗೆ ಮಾಹಿತಿ ನೀಡಿ- ಸುಪ್ರೀಂಕೋರ್ಟ್...

ಎಸ್ ಬಿಐ ಅರ್ಜಿ ವಜಾ: ಚುನಾವಣಾ ಬಾಂಡ್ ಗಳ ಬಗ್ಗೆ ನಾಳೆಯೊಳಗೆ ಮಾಹಿತಿ ನೀಡಿ- ಸುಪ್ರೀಂಕೋರ್ಟ್ ಸೂಚನೆ.

ನವದೆಹಲಿ,ಮಾರ್ಚ್,11,2024(www.justkannada.in): ಚುನಾವಣಾ ಬಾಂಡ್ ಗಳ ಬಗ್ಗೆ ಮಾಹಿತಿ ನೀಡಲು ಮೂರು ತಿಂಗಳ ಕಾಲ ಸಮಯಾವಕಾಶ ನೀಡುವಂತೆ ಕೋರಿ ಎಸ್ ಬಿಐ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಚುನಾವಣಾ ಬಾಂಬ್ ಗಳ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ , ಎಸ್ ಬಿಐ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿ ನಾಳೆ ಕೆಲಸದ ಅವಧಿಯೊಳಗೆ ಚುನಾವಣಾ ಬಾಂಡ್ ಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

ಈ ಹಿಂದೆ ಚುನಾವಣಾ ಬಾಂಡ್ ಗಳ ಬಗ್ಗೆ ಮಾಹಿತಿ ನೀಡುವಂತೆ ಎಸ್ ಬಿಐ ಮತ್ತು ಆರ್ ಬಿಐಗೆ ಸೂಚಿಸಿ ಮೂರ ವಾರಗಳ ಕಾಲ  ಗಡುವು ನೀಡಿತ್ತು. ಆದರೆ ಎಸ್ ಬಿಐ ಮೂರು ತಿಂಗಳುಗಳ ಕಾಲ ಕಾಲಾವಕಾಶ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್, 26 ದಿನಗಳ ಕಾಲ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿ,  ನಾಳೆ ಕೆಲಸದ ಅವಧಿಯೊಳಗೆ ಮಾಹಿತಿ ನೀಡಿ ಎಂದು ಸೂಚಿಸಿತು.

Key words: SBI -information – election bonds – tomorrow-Supreme Court notice.