Friday, September 18, 2026

BDA Apartments

Home Front Page ಸಿಎಂ ಸ್ಥಾನದಿಂದ ಕೆಳಗಿಳಿಸಿದವರನ್ನೇ ಈಗ ತಬ್ಬಿಕೊಂಡಿದ್ದಾರೆ- ಮೈತ್ರಿ ಕುರಿತು ಡಿ.ಕೆ ಶಿವಕುಮಾರ್ ವ್ಯಂಗ್ಯ.

ಸಿಎಂ ಸ್ಥಾನದಿಂದ ಕೆಳಗಿಳಿಸಿದವರನ್ನೇ ಈಗ ತಬ್ಬಿಕೊಂಡಿದ್ದಾರೆ- ಮೈತ್ರಿ ಕುರಿತು ಡಿ.ಕೆ ಶಿವಕುಮಾರ್ ವ್ಯಂಗ್ಯ.

ಬೆಂಗಳೂರು,ಮಾರ್ಚ್,9,2024(www.justkannada.in):  ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ ಡಿಸಿಎಂ ಡಿ.ಕೆ ಶಿವಕುಮಾರ್ , ಈ ರಾಜಕೀಯ ನೋಡಿದ್ರೆ ಬಹಳ ನೋವಾಗುತ್ತೆ . ಕುಮಾರಸ್ವಾಮಿಯನ್ನ  ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ರು.  ಬಿಎಸ್ ಯಡಿಯೂರಪ್ಪ, ಯೋಗೇಶ್ವರ್,  ಮುನಿರತ್ನ ಷಡ್ಯಂತ್ರ ಮಾಡಿ ಕೆಳಗಿಳಿಸಿದರು. ಈಗ  ಹೆಚ್.ಡಿಕೆ ಅವರನ್ನೆ ತಬ್ಬಿಕೊಂಡಿದ್ದಾರೆ. ರಾಜಕೀಯದಲ್ಲಿ ಒಂದು ಸಿದ್ದಾಂತ ಇರಬೇಕು. ಹೆಚ್.ಡಿಕೆ ಅದು ಹೇಗೆ ಜೀರ್ಣಿಸಿಕೊಂಡರು ಎಂದು ವ್ಯಂಗ್ಯವಾಡಿದರು.ಸಿಎಂ ಸ್ಥಾನದಿಂದ ಕೆಳಗಿಳಿಸಿದವರನ್ನೇ ಈಗ ತಬ್ಬಿಕೊಂಡಿದ್ದಾರೆ dks-dk-shivakumar dks dk shivak...

ವಿರೋಧ ಪಕ್ಷಕ್ಕೆ ಟೀಕಿಸುವುದು ಬಿಟ್ಟು ಬೇರೇನು ಇಲ್ಲ.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕುರಿತು ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ವಿರೋಧ ಪಕ್ಷಕ್ಕೆ ಟೀಕಿಸೋದು ಬಿಟ್ಟು ಬೇರೇನು ಇಲ್ಲ. ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕಾರ ಮಾಡಲು ರೆಡಿ. ಮೊದಲ ಬಾರಿಗೆ ಟ್ಯಾಂಕರ್ ನಿಯಂತ್ರಣಕ್ಕೆ ತೆಗೆದುಕೊಂಡು ಟ್ಯಾಂಕರ್ ಮಾಫಿಯಾ ತಡೆಗಟ್ಟಲಾಗಿದೆ. ದರ ನಿಗದಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೇರೆ ಕಡೆ ಟ್ಯಾಂಕರ್ ತರಿಸಲು  ಕೂಡ  ಸೂಚಿಸಿದ್ದೇನೆ ಎಂದರು.

Key words: DCM-DK Shivakumar –BJP-JDS-alliance