Friday, October 23, 2026

Dasara Wishes

ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರದ ಬಗ್ಗೆ ಮೊದಲೇ ಹೇಳಿದ್ದೆ- ಮಾಜಿ ಸಿಎಂ ಹೆಚ...
Happy Dasara
Home Front Page ತನಿಖೆ ಮುಗಿಯುವರೆಗೆ ನಾಸಿರ್ ಹುಸೇನ್ ಪ್ರಮಾಣ ವಚನ ಬೇಡ: ಉಪರಾಷ್ಟ್ರಪತಿಗೆ ಪತ್ರ – ಬಿವೈ ವಿಜಯೇಂದ್ರ.

ತನಿಖೆ ಮುಗಿಯುವರೆಗೆ ನಾಸಿರ್ ಹುಸೇನ್ ಪ್ರಮಾಣ ವಚನ ಬೇಡ: ಉಪರಾಷ್ಟ್ರಪತಿಗೆ ಪತ್ರ – ಬಿವೈ ವಿಜಯೇಂದ್ರ.

ಸಿಜೆಪಿಗೆ ಕಾಂಗ್ರೆಸ್ ನಿಂದ ಹಣಕಾಸಿನ ನೆರವು – ಬಿವೈ ವಿಜಯೇಂದ್ರ

ಬೆಳಗಾವಿ,ಮಾರ್ಚ್,5,2024(www.justkannada.in): ಪಾಕ್ ಪರ ಘೋಷಣೆ ಕೂಗಿರುವುದು ಎಫ್ ಎಸ್ ಎಲ್ ವರದಿಯಲ್ಲಿ  ದೃಢವಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ. ಈ ಸಂಬಂಧ ತನಿಖೆ ಮುಗಿಯುವವರೆಗೆ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಪ್ರಮಾಣ ವಚನ ಸ್ವೀಕಾರ ಮಾಡಬಾರದು ಎಂದು ಉಪರಾಷ್ಟ್ರಪತಿ ಅವರಿಗೆ ಪತ್ರ ಬರೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಪ್ರಕರಣ ಸಂಬಂಧ ತನಿಖೆ ಮುಗಿಯುವವರೆಗೆ ನಾಸೀರ್ ಹುಸೇನ್ ಪ್ರಮಾಣ ವಚನ ಸ್ವೀಕಾರ ಮಾಡಬಾರದು. ಪ್ರತಿಜ್ಞಾವಿಧಿ ಬೋಧಿಸದಂತೆ ಈ ಸಂಬಂಧ ಉಪರಾಷ್ಟ್ರಪತಿಗೆ ಪತ್ರ ಬರೆಯುತ್ತೇವೆ. ಸರ್ಕಾರವೇ ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ.  ಎಫ್ಎಸ್ ಎಲ್ ವರದಿ  ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದರು.ಸಿಜೆಪಿಗೆ ಕಾಂಗ್ರೆಸ್ ನಿಂದ ಹಣಕಾಸಿನ ನೆರವು – ಬಿವೈ ವಿಜಯೇಂದ್ರ

‘ಸರ್ಕಾರ ಇದೂವರೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಹಿರಂಗ ಮಾಡಲು ಸಿದ್ಧವಿಲ್ಲ. ರಾಜ್ಯದ ಜನರಿಗೆ ಹೇಳಬಾರದಂಥ ಸಂಗತಿ ಅದರಲ್ಲಿ ಏನಿದೆ? ಈ ಬಗ್ಗೆ ಪೊಲೀಸರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ’ ಎಂದು ಬಿವೈ ವಿಜಯೇಂದ್ರ ಕಿಡಿ ಕಾರಿದರು.

Key words: Nasir Hussain -not – take oath -till –investigation-BY Vijayendra.