Sunday, August 30, 2026

BDA Apartments

Home Front Page ಬೆಂಗಳೂರಿನಲ್ಲಿ ಮತ್ತೆ ಸಭೆ ಸೇರಿದ ಅನರ್ಹ ಶಾಸಕರು…

ಬೆಂಗಳೂರಿನಲ್ಲಿ ಮತ್ತೆ ಸಭೆ ಸೇರಿದ ಅನರ್ಹ ಶಾಸಕರು…

ಬೆಂಗಳೂರು,ಸೆ,13,2019(www.justkannada.in):  ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆ ಅನರ್ಹ ಶಾಸಕರು ಇಂದು ಬೆಂಗಳೂರಿನಲ್ಲಿ ಮತ್ತೆ ಸಭೆ ನಡಸಲು ಮುಂದಾಗಿದ್ದಾರೆ.

ಬೆಂಗಳೂರಿನ  ಅನರ್ಹ ಶಾಸಕ ಡಾ.ಸುಧಾಕರ್ ನಿವಾಸದಲ್ಲಿ ಅನರ್ಹ ಶಾಸಕರು ಸಭೆ ನಡೆಸಿ ಸಮಾಲೋಚನೆ ಮಾಡುತ್ತಿದ್ದಾರೆ.  ಸುಪ್ರೀಂಕೋರ್ಟ್ ನಲ್ಲಿ  ಅರ್ಜಿ ವಿಚಾರಣೆ ವಿಳಂಬವಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಸಭೆಯಲ್ಲಿ  ಎಂಟಿಬಿ ನಾಗರಾಜ್, ಮುನಿರತ್ನ, ಶ್ರೀಮಂತ ಪಾಟೀಲ್, ಬೈರತಿ ಬಸವರಾಜ್, ಬಿ.ಸಿ.ಪಾಟೀಲ್  ಭಾಗಿಯಾಗಿದ್ದಾರೆ.

ಇನ್ನು ಕಾನೂನು ಹೋರಾಟಕ್ಕೆ ಬಿಜೆಪಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಬಿಜೆಪಿ ವಿರುದ್ದ ಅನರ್ಹ ಶಾಸಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಅನರ್ಹತೆ ಪ್ರಕರಣದ ಅರ್ಜಿ ವಿಚಾರಣೆ ವಿಳಂಬದಿಂದ ಒಂದೂವರೆ ತಿಂಗಳಿಂದಲೂ ಅತಂತ್ರರಾಗಿದ್ದು ತಮ್ಮ ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸಲು ಇಂದು ಡಾ.ಸುಧಾಕರ್ ನಿವಾಸದಲ್ಲಿ ಸಭೆ ಸೇರಿದ್ದಾರೆ.

Key words: disqualified –MLAs- meeting-Bangalore.