Friday, August 21, 2026

BDA Apartments

Home Front Page ಬಿಜೆಪಿ ಮತ್ತೆ ಗೆದ್ದೆರೇ ಸರ್ವಾಧಿಕಾರ ಬರುತ್ತೆ: ಮೋದಿಯನ್ನ ಶಕ್ತಿಶಾಲಿ ಮಾಡಬೇಡಿ- ಮಲ್ಲಿಕಾರ್ಜುನ ಖರ್ಗೆ.

ಬಿಜೆಪಿ ಮತ್ತೆ ಗೆದ್ದೆರೇ ಸರ್ವಾಧಿಕಾರ ಬರುತ್ತೆ: ಮೋದಿಯನ್ನ ಶಕ್ತಿಶಾಲಿ ಮಾಡಬೇಡಿ- ಮಲ್ಲಿಕಾರ್ಜುನ ಖರ್ಗೆ.

ಮಂಗಳೂರು,ಫೆಬ್ರವರಿ,17,2024(www.justkannada.in):  ದೇಶದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್ ಡಿಎ ಕೂಟ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರ ಬರುತ್ತದೆ. ಹೀಗಾಗಿ ನರೇಂದ್ರ ಮೋದಿಯನ್ನ ಶಕ್ತಿಶಾಲಿ ಮಾಡಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜನರಲ್ಲಿ ಮನವಿ ಮಾಡಿದರು.

ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾವು ಅಧಿಕಾರಕ್ಕೆ ಬಂದರೇ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಜಾರಿಗೆ ತರುತ್ತೇವೆ. ಏನಾದರೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ  ಚುನಾವಣೆ ನಡೆಯಲ್ಲ . ಸರ್ವಾಧಿಕಾರ ಬರುತ್ತದೆ. ಹೀಗಾಗಿ   ಮೋದಿಯನ್ನ ಶಕ್ತಿಶಾಲಿಯಾಗಿ ಮಾಡಬೇಡಿ  ಎಂದರು.

ಮೋದಿ ನಮ್ಮನ್ನು ಮುಗಿಸುವುದಕ್ಕೆ ಹೊರಟಿದ್ದಾರೆ. ನಮ್ಮ ಅಕೌಂಟ್ ಗಳನ್ನ ಸೀಜ್ ಮಾಡಿದ್ದರು. ಜನ ರೊಚ್ಚಿಗೆದ್ದಾಗ ಅಕೌಂಟ್ ರಿಲೀಸ್  ಮಾಡಿದರು . ನೀವು ಕೋಟ್ಯಂತರ ರೂಪಾಯಿ ಹೊಡೆಯುತ್ತಿದ್ದೀರಿ. ನಮ್ಮ ಪಕ್ಷದ ಸಣ್ಣ ಪುಟ್ಟ ಹಣಕ್ಕೆ ಕೈ ಹಾಕುತ್ತಿದ್ದೀರಿ.  ನಮ್ಮ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಸಿಗುತ್ತಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

Key words:  Dictatorship -will  –BJP- wins- again- congress-Mallikarjuna Kharge.