Thursday, October 15, 2026

Dasara Wishes

Happy Dasara
Home Front Page ಕಾರು ಡಿಕ್ಕಿಯಾಗಿ ಭಾರಿ ಗಾತ್ರದ ಹುಲಿ ಸಾವು.

ಕಾರು ಡಿಕ್ಕಿಯಾಗಿ ಭಾರಿ ಗಾತ್ರದ ಹುಲಿ ಸಾವು.

ಮೈಸೂರು,ಜನವರಿ,29,2024(www.justkannada.in): ಕಾರು ಢಿಕ್ಕಿಯಾಗಿ ಭಾರಿ ಗಾತ್ರದ ಹುಲಿ ಸಾವನ್ನಪ್ಪಿರುವ ಘಟನೆ  ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ  ನಡೆದಿದೆ.

ನಿನ್ನೆ ತಡರಾತ್ರಿ 12 ಗಂಟೆ ವೇಳೆಗೆ ಘಟನೆ ನಡೆದಿದೆ.  ಇಟಿಯೋಸ್ ಕಾರು ಹುಲಿಗೆ ಡಿಕ್ಕಿ ಹೊಡೆದು ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ.  ಘಟನೆ ನಡೆದ ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಮಾಲತಿ ಪ್ರಿಯ, ಲಕ್ಷ್ಮಿ ನಾರಾಯಣ್ ಸುರೇಂದ್ರ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹುಲಿಯ ಮೃತ ದೇಹ ವಶಕ್ಕೆ ಪಡೆದಿದ್ದಾರೆ.ಕಾರು ಡಿಕ್ಕಿಯಾಗಿ ಭಾರಿ ಗಾತ್ರದ ಹುಲಿ ಸಾವು tiger

ಇತ್ತೀಚಿಗೆ ನಂಜನಗೂಡು ಹಾಗೂ ಸುತ್ತ ಮುತ್ತ ಹುಲಿ ಕಾಣಿಸಿಕೊಂಡು ಆತಂಕವನ್ನ ಸೃಷ್ಠಿಸಿತ್ತು. ಇದೇ ಹುಲಿ ಅಪಘಾತದಲ್ಲಿ ಸಿಲುಕಿ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.  ಸದ್ಯ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲು ಅರಣ್ಯಾಧಿಕಾರಿಗಳ ನಿರ್ಧಾರ ಮಾಡಿದ್ದು. ಅಪಘಾತವಾದ ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Key words:  huge tiger-died – car- collision-mysore