Sunday, October 18, 2026

Dasara Wishes

Happy Dasara
Home Front Page ಪಾದಯಾತ್ರೆಗೆ ತಡೆಯೊಡ್ಡುವುದು ಸ್ವಾತಂತ್ರ ಕಸಿದ ಹಾಗೆ- ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಪಾದಯಾತ್ರೆಗೆ ತಡೆಯೊಡ್ಡುವುದು ಸ್ವಾತಂತ್ರ ಕಸಿದ ಹಾಗೆ- ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಬೆಂಗಳೂರು,ಜನವರಿ,23,2024(www.justkannada.in):ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನ  ಅಸ್ಸಾಂನ ಗುವಾಹಟಿಗೆ ಪ್ರವೇಶಿಸಲು ಬಿಡದೆ  ತಡೆಯೊಡ್ಡಲಾಗಿದ್ದು ಇದೀಗ ಅಸ್ಸಾಂ ಸರ್ಕಾರದ ವಿರುದ್ದ ಕಾಂಗ್ರೆಸ್ ಕೆಂಡಕಾರಿದ್ದು ಪ್ರತಿಭಟನೆ ಜೋರಾಗಿದೆ.

ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ನೇತೃತ್ವದ ಭಾರತ್ ನ್ಯಾಯ ಪಾದಯಾತ್ರೆ ಮಟ್ಟ ಹಾಕೋದು ಸ್ವಾತಂತ್ರವನ್ನ ಕಸಿದ ಹಾಗೆ. ಅಸ್ಸಾಂ ಸರ್ಕಾರದ ನಡೆಯನ್ನ ಖಂಡಿಸುತ್ತೇನೆ ಎಂದು ಹರಿಹಾಯ್ದರು.

 

ನಾವು ಗಾಂಧೀಜಿ ರಾಮನನ್ನ ಒಪ್ಪಿಕೊಂಡಿದ್ದೇವೆ, ಬಿಜೆಪಿ ರಾಮನನಲ್ಲ.

ನಾವು ವಿರೋಧಿಸುತ್ತಿರುವುದು ಬಿಜೆಪಿ ರಾಜಕೀಯವನ್ನ.  ನಾವು ಬಿಜೆಪಿಯ ಶ್ರೀರಾಮನನ್ನ ವಿರೋಧ ಮಾಡುತ್ತಿದ್ದೇವೆ. ಮಹಾತ್ಮ ಗಾಂಧೀಜಿಯವರ ರಾಮನನ್ನ ನಾವು ಒಪ್ಪಿಕೊಂಡಿದ್ದೇವೆ.  ಕರ್ನಾಟಕದಲ್ಲಿ ರಾಮಮಂದಿರಗಳು ಇಲ್ಲವಾ ಎಲ್ಲೆಲ್ಲೂ ರಾಮಮಂದಿರಗಳಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: congress -padayatre- Block- Assam- CM Siddaramaiah