Friday, October 16, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಕರ ಸೇವಕರ ಬಂಧನ ವಿಚಾರ: ನಾವು ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ- ಸಿಎಂ ಸಿದ್ದರಾಮಯ್ಯ.

ಕರ ಸೇವಕರ ಬಂಧನ ವಿಚಾರ: ನಾವು ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ- ಸಿಎಂ ಸಿದ್ದರಾಮಯ್ಯ.

ಕೊಪ್ಪಳ,ಜನವರಿ,2,2024(www.justkannada.in): ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಪ್ರಕರಣ ಸಂಬಂಧ, ನಾವು ಯಾವುದೇ ದ್ವೇಷದ ರಾಜಕಾರಣವನ್ನ ಮಾಡಿಲ್ಲ. ನಿರಪರಾಧಿಗಳನ್ನ ಬಂಧಿಸುವ ಕೆಲಸ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಳೆಯ ಪ್ರಕರಣಗಳ ವಿಲೇವಾರಿ ಮಾಡಲು ಸೂಚನೆ  ನೀಡಲಾಗಿದೆ. ಹೀಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಾವು ಯಾವುದೇ ದ್ವೇಷದ ರಾಜಕಾರಣ ಮಾಡಲ್ಲ. ತಪ್ಪು ಮಾಡಿದವರಿಗೆ  ಏನು ಮಾಡಬೇಕು. ತಪ್ಪು ಮಾಡಿದ್ರೆ ಸುಮ್ಮನೆ ಬಿಟ್ಟು ಬಿಡಬೇಕಾ.. ಕೋರ್ಟ್ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳುತ್ತೀವಿ ಎಂದರು.ಕರ ಸೇವಕರ ಬಂಧನ ವಿಚಾರ: ನಾವು ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ- ಸಿಎಂ ಸಿದ್ದ...

ಬರ ಪರಿಹಾರ ವಿತರಣೆ ಕುರಿತು ಪ್ರತಿಕ್ರಿಯಿಸಿದ  ಸಿಎಂ ಸಿದ್ದರಾಮಯ್ಯ, ಬರ ಪರಿಹಾರ ವಿತರಣೆ ನಡೆಯುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಹಾಗಾಗಿ ವಿಳಂಬವಾಗಿದೆ ಎಂದರು.

Key words: Arrest-hubli- We – not -any -hate -politics- CM Siddaramaiah.