ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ವಿಚಾರ: ಹೆಚ್. ಅಂಜನೇಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು.

ವಿಜಯಪುರ,ಜನವರಿ,2,2024(www.justkannada.in):  ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯರನ್ನ ಆಹ್ವಾನಿಸದ ಹಿನ್ನೆಲೆ , ಕಾರ್ಯಕ್ರಮಕ್ಕೆ ಕರೆಯದಿರೋದೇ ಒಳ್ಳೆಯದಾಯಿತು ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಹೆಚ್.ಅಂಜನೇಯಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಭಾರತ ಸರ್ಕಾರದ ಮಂತ್ರಿ ನನ್ನನ್ನೇ ಕರೆದಿಲ್ಲ. ನನಗೆ ಕಾರ್ಯಕ್ರಮಕ್ಕೆ ಬರಬೇಡಿ ಎಂದು ಹೇಳಿದ್ದಾರೆ.  ಯಾವ ರಾಜ್ಯದ ಬಿಜೆಪಿ ಸಿಎಂಗೂ ಆಹ್ವಾನ ನೀಡಿಲ್ಲ. ಅಲ್ಲಿ ಜಾಗ ಇಲ್ಲ. ಹೀಗಾಗಿ ಯಾರನ್ನ ಕರೆಯಬೇಕೆಂದು ಸಮಿತಿ ನಿರ್ಧರಿಸುತ್ತದೆ. ಹೆಚ್.ಅಂಜನೇಯರಿಗೆ  ಸದ್ಭುದ್ದಿ ನೀಡಲಿ ಎಂದು ಟಾಂಗ್ ನೀಡಿದರು.

ರಾಮಮಂದಿರ ಆಗಿದ್ದಕ್ಕೆ ಕಾಂಗ್ರೆಸ್ ಗೆ ಹೊಟ್ಟೆ ಕಿಚ್ಚು. ಹೀಗಾಗಿ 31 ವರ್ಷದ ಹಿಂದೆ ಹಳೇ ಕೇಸ್ ಓಪನ್ ಮಾಡಿದ್ದಾರೆ. ಹೋರಾಟಗಾರರನ್ನ  ಅರೆಸ್ಟ್ ಮಾಡಿ ನೀಚ ಕೃತ್ಯವೆಸಗಿದ್ದಾರೆ. ಅಲ್ಲಿನ ಇನ್ಸ್ ಪೆಕ್ಟರ್ ದ್ವೇಷದ ಭಾವನೆಯಿಂದ ವರ್ತಿಸುತ್ತಿದ್ದಾನೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.

Key words: Invitation – Ram Mandir –Inauguration- Program-Union Minister- Prahlad Joshi