Friday, October 16, 2026

Dasara Wishes

Happy Dasara
Home Front Page ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 3ನೇ ಟಿಪ್ಪು ಸುಲ್ತಾನ್ ಎಂದ ಸಚಿವ ಎಂ.ಬಿ  ಪಾಟೀಲ್.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 3ನೇ ಟಿಪ್ಪು ಸುಲ್ತಾನ್ ಎಂದ ಸಚಿವ ಎಂ.ಬಿ  ಪಾಟೀಲ್.

ವಿಜಯಪುರ,ಡಿಸೆಂಬರ್,25,2023(www.justkannada.in):  ಸಿಎಂ ಸಿದ್ದರಾಮಯ್ಯರನ್ನ 2ನೇ ಟಿಪ್ಪು ಸುಲ್ತಾನ್ ಎಂದು ಲೇವಡಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್  3ನೇ ಟಿಪ್ಪು ಸುಲ್ತಾನ್. ಈ ಹಿಂದೆ ಯತ್ನಾಳ್ ಟಿಪ್ಪು ಸುಲ್ತಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು  ಆ ಪೋಟೊವನ್ನ ಯಾರೂ ಮಾಧ್ಯಮದವರು ತೋರಿಸಿದ್ದರು. ನಾವು ಯತ್ನಾಳ್ ರನ್ನ 3ನೇ ಟಿಪ್ಪು ಸುಲ್ತಾನ್ ಎನ್ನುತ್ತೇವೆ ಎಂದು ಟಾಂಗ್ ನೀಡಿದರು.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 3ನೇ ಟಿಪ್ಪು ಸುಲ್ತಾನ್ ಎಂದ ಸಚಿವ ಎಂ.ಬಿ ಪಾಟೀಲ...

ರೈತರ ಬಗ್ಗೆ ಶಿವಾನಂದ್ ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್ ಏನು ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ಯಾವ ಅರ್ಥ,  ಸಂದರ್ಭದಲ್ಲಿ ಹೇಳಿದ್ದಾರೆ ಅವರನ್ನೇ ಕೇಳೋದು ಸೂಕ್ತ ಎಂದು ತಿಳಿಸಿದರು.

Key words: MLA -Basana Gowda Patil Yatnal -3rd Tipu Sultan – Minister- MB Patil