Sunday, September 20, 2026

BDA Apartments

Home Front Page ಜಾತಿಗಣತಿ ವರದಿ ಜಾರಿ ಮಾಡುವುದು ಬಿಡುವುದರ ಬಗ್ಗೆ ಅವರನ್ನೇ ಕೇಳಿ- ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ.

ಜಾತಿಗಣತಿ ವರದಿ ಜಾರಿ ಮಾಡುವುದು ಬಿಡುವುದರ ಬಗ್ಗೆ ಅವರನ್ನೇ ಕೇಳಿ- ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ.

ದಾವಣಗೆರೆ, ಡಿಸೆಂಬರ್​ 16,2023(www.justkannada.in):   ನಾನೇ ಜಾತಿ ಗಣತಿ ವರದಿ ನೋಡಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ವರದಿ ಜಾರಿ ಮಾಡುವುದು ಬಿಡುವುದರ ಬಗ್ಗೆ ಅವರನ್ನೆ ಕೇಳಿ ಎಂದು ಹಿರಿಯ ಶಾಸಕ ಹಾಗೂ ಅಖಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಮನೂರ ಶಿವಶಂಕರಪ್ಪ, ದಾವಣಗೆರೆಯಲ್ಲಿ ಡಿ. 23 ಮತ್ತು 24 ರಂದು ಅಖಿಲ ಭಾತರ ವೀರಶೈವ ಮಹಾ ಸಭೆಯ 24 ನೇ ಮಹಾ ಅಧಿವೇಶನ ನಡೆಯಲಿದೆ. ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಆಹ್ವಾನಿಸಲಾಗಿದೆ. ನೋಡಬೇಕು ಬರುತ್ತಾರಾ ಅಂತಾ. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನ ಮಾತ್ರ ಆಹ್ವಾನಿಸಿಲ್ಲ.ಜಾತಿಗಣತಿ ವರದಿ ಜಾರಿ ಮಾಡುವುದು ಬಿಡುವುದರ ಬಗ್ಗೆ ಅವರನ್ನೇ ಕೇಳಿ shamanur (1) shamanur 1

ಜಾತಿ ಗಣತಿ ಜಾರಿಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಅಹಿಂದಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸಹ ಪಾಲ್ಗೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಮನೂರ ಶಿವಶಂಕರಪ್ಪ,  ಅವರು ಅಲ್ಲಿ ಮಾಡಲಿ‌. ನಾವು ಇಲ್ಲಿ ದಾವಣಗೆರೆಯಲ್ಲಿ‌ ವೀರಶೈವ ಸಮಾವೇಶ ಮಾಡುತ್ತೇವೆ ಎಂದರು.

Key words: leaving – implementation – caste census report – MLA- Shamanur Shivashankarappa,