Sunday, August 23, 2026

BDA Apartments

Home Front Page ನಿಮ್ಮ ಯಾವ ಹಕ್ಕು ನಷ್ಟವಾಗಿದೆ ಎಂದು ರಿಟ್ ಅರ್ಜಿ ಸಲ್ಲಿಸಿದ್ದೀರಾ..? ಶಾಸಕ ಯತ್ನಾಳ್ ಗೆ ಹೈಕೋರ್ಟ್...

ನಿಮ್ಮ ಯಾವ ಹಕ್ಕು ನಷ್ಟವಾಗಿದೆ ಎಂದು ರಿಟ್ ಅರ್ಜಿ ಸಲ್ಲಿಸಿದ್ದೀರಾ..? ಶಾಸಕ ಯತ್ನಾಳ್ ಗೆ ಹೈಕೋರ್ಟ್ ಪ್ರಶ್ನೆ.

ಬೆಂಗಳೂರು,ಡಿಸೆಂಬರ್,15,2023(www.justkannada.in) ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದದ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಒಪ್ಪಿಗೆ ಹಿಪಡೆಯುವ ಸರ್ಕಾರದ ಕ್ರಮವನ್ನ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ.

ಈ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಸರ್ಕಾರದ ಕ್ರಮದಿಂದ ನೀವು ಹೇಗೆ ಭಾದಿತರಾಗುತ್ತೀರಾ…? ನಿಮ್ಮ ಯಾವಹಕ್ಕು ನಷ್ಟವಾಗಿದೆ ಎಂದು ರಿಟ್ ಅರ್ಜಿ ಸಲ್ಲಿಸಿದ್ದೀರಾ..? ನೀವು ಪಿಐಎಲ್ ಸಲ್ಲಿಸದೇ ರಿಟ್ ಸಲ್ಲಿಸಿರುವುದೇಕೆ  ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಕೀಲರಿಗೆ ನ್ಯಾ. ಎಂ. ನಾಗಪ್ರಸನ್ನ ಪ್ರಶ್ನೆ ಹಾಕಿದ್ದಾರೆ.

ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆ ಅನುಮತಿ ವಾಪಸ್ ಪಡೆಯುವ ರಾಜ್ಯ ಸರ್ಕಾರದ ಕ್ರಮವನ್ನ ಪ್ರಶ್ನಿಸಿ ಶಾಸಕ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

Key words: DCM-DK Shivakumar-CBI-probe-MLA-Basanagowda patil yatnal-high court