Sunday, August 9, 2026

BDA Apartments

Home Front Page ರಾಜ್ಯದಲ್ಲಿ ಈಗ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ- ಜಗದೀಶ್ ಶೆಟ್ಟರ್ ವ್ಯಂಗ್ಯ.

ರಾಜ್ಯದಲ್ಲಿ ಈಗ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ- ಜಗದೀಶ್ ಶೆಟ್ಟರ್ ವ್ಯಂಗ್ಯ.

ಹುಬ್ಬಳ್ಳಿ ನವೆಂಬರ್ 30,2023(www.justkannada.in):  ರಾಜ್ಯದಲ್ಲಿ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ . ಈಗ ವಿಧಾನಸಭಾ ಚುನಾವಣೆ ನಡೆಸಿದರೆ ಬಿಜೆಪಿಗೆ  40 ಸ್ಥಾನ ಕೂಡ ಸಿಗುವುದಿಲ್ಲ ಎಂದು ಕಾಂಗ್ರೆಸ್ ಎಂಎಲ್ ಸಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್,   2018ರ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸಭೆ ಚುನಾವಣಾ ನಡೆಯಿತು,  ಆಗ ಎಷ್ಟೇ ಹೋರಾಡಿದರೂ ಕೊನೆಗೆ ಬಂದು ನಿಂತಿದ್ದು 104ಕ್ಕೆ ಮಾತ್ರ. ಈಗ  ಬಿಜೆಪಿ ಹದಗೆಟ್ಟು ಹೋಗಿದೆ. ಈಗ ಚುನಾವಣಾ ನಡೆದರೆ 66 ಅಲ್ಲಾ 40 ಸೀಟ್ ಸಹ ಬಿಜೆಗೆ ಬರೋದಿಲ್ಲ’ ಎಂದು ಹೇಳಿದರು.

ವಿಜಯೇಂದ್ರ  ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ ಕಾರಣ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಮತ್ಕಾರ ನಡೆಯಲಿದೆ ಅಂತ ಭಾವಿಸುವ ಅವಶ್ಯಕತೆ ಇಲ್ಲ,. ವಿಜಯೇಂದ್ರ ಅಲ್ಲಾ ಯಾರು ಅಧ್ಯಕ್ಷ ಆದರೂ ಸಹ ಹದಗೆಟ್ಟಿರುವ  ಬಿಜೆಪಿಯನ್ನ ಸರಿ ಮಾಡಲು ಆಗುವುದಿಲ್ಲ. ಇನ್ನು ಐದು ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ಫಲಿತಾಂಶ ಬರುತ್ತದೆ ಎಂದು ತಿಳಿಸಿದರು.

Key words: BJP – deteriorated – repair –congress-MLC- Jagdish Shettar