Wednesday, August 12, 2026

BDA Apartments

Home Front Page ರಾಜ್ಯ ಕಾನೂನು ಕಾರ್ಯದರ್ಶಿಗಳಾಗಿ ವರ್ಗಾವಣೆಯಾದ ಜಿ ಎಸ್ ಸಂಗ್ರೇಶಿ ಅವರಿಗೆ ಬೀಳ್ಕೊಡುಗೆ.

ರಾಜ್ಯ ಕಾನೂನು ಕಾರ್ಯದರ್ಶಿಗಳಾಗಿ ವರ್ಗಾವಣೆಯಾದ ಜಿ ಎಸ್ ಸಂಗ್ರೇಶಿ ಅವರಿಗೆ ಬೀಳ್ಕೊಡುಗೆ.

ಮೈಸೂರು,ನವೆಂಬರ್,15,2023(www.justkannada.in):  ರಾಜ್ಯ ಕಾನೂನು ಕಾರ್ಯದರ್ಶಿಗಳಾಗಿ ವರ್ಗಾವಣೆಯಾದ ಮೈಸೂರು ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶರಾಗಿದ್ದ  ಜಿ. ಎಸ್ ಸಂಗ್ರೇಶಿ ಅವರಿಗೆ ಇಂದು  ಬೀಳ್ಕೊಡಲಾಯಿತು.

ಕಳೆದ 9 ತಿಂಗಳಿನಿಂದ ಮೈಸೂರು ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶರಾಗಿ ಜನಸ್ನೇಹಿಯಾಗಿ ಹಾಗೂ ವಕೀಲರು ನ್ಯಾಯಾಲಯದ ಸಿಬ್ಬಂದಿ ಜೊತೆ ಉತ್ತಮ‌ ಸಮನ್ವಯತೆಯೊಂದಿಗೆ ಕರ್ತವ್ಯ ನಿರ್ವಹಿಸಿದ ಜಿ. ಎಸ್ ಸಂಗ್ರೇಶಿ ಅವರಿಗೆ   ಮೈಸೂರು ಜಿಲ್ಲಾ ವಕೀಲರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ಮೈಸೂರು ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ  ಜಿ ಎಸ್ ಸಂಗ್ರೇಶಿ ಹಾಗೂ ಅವರ ಪತ್ನಿ ಅನಸೂಯ ಅವರಿಗೆ ಮೈಸೂರು ಪೇಟ ತೊಡಿಸಿ ಗಂಧದ ಹಾರ ಶಾಲು ಹೊದಿಸಿ ಗೌರವ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ಪುಟ್ಟಸ್ವಾಮಿ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಸುಧಾ ಸೇತುರಾಂ, ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ ಮಹದೇವಸ್ವಾಮಿ ಕಾರ್ಯದರ್ಶಿ ಉಮೇಶ್ ಉಪಾಧ್ಯಕ್ಷ ಪುಟ್ಟ ಸಿದ್ದೇಗೌಡ, ರಾಜ್ಯ ವಕೀಲರ ಪರಿಷತ್ ಸದಸ್ಯ ಚಂದ್ರಮೌಳಿ ಸೇರಿ ನೂರಾರು ಹಿರಿಯ ಕಿರಿಯ ವಕೀಲರು ಭಾಗಿಯಾಗಿದ್ದರು.

Key words: mysore- GS Sangreshi – Farewell- transferred- State Law Secretary.