Sunday, August 16, 2026

BDA Apartments

Home Cinema ಡಿ.1ಕ್ಕೆ ಬಹುನಿರೀಕ್ಷಿತ ಸಲಾರ್ ಚಿತ್ರದ ಟ್ರೇಲರ್ ರಿಲೀಸ್ ಖಚಿತ !

ಡಿ.1ಕ್ಕೆ ಬಹುನಿರೀಕ್ಷಿತ ಸಲಾರ್ ಚಿತ್ರದ ಟ್ರೇಲರ್ ರಿಲೀಸ್ ಖಚಿತ !

ಬೆಂಗಳೂರು, ನವೆಂಬರ್ 10, 2023 (www.justkannada.in): ಡಿಸೆಂಬರ್ 1ರಂದು ಬಹುನಿರೀಕ್ಷಿತ ಸಲಾರ್ ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಡಿಸೆಂಬರ್ 22ಕ್ಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಅಂದಹಾಗೆ ಕೆಜಿಎಫ್ 2 ಚಿತ್ರಕ್ಕೂ ‘ಸಲಾರ್’ಗೂ ನಂಟಿದೆ ಎಂದು ಮೊದಲಿನಿಂದಲೂ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದರ ಜೊತೆಗೆ ಮತ್ತೊಂದು ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ.  ‘ಸಲಾರ್’ ಚಿತ್ರದಲ್ಲಿ ಯಶ್ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.

ಐದು ಭಾಷೆಯಲ್ಲಿ ಒಂದೇ ಟ್ರೇಲರ್ ಬಿಡುಗಡೆ ಮಾಡಲು ಚಿತ್ರ ತಂಡ ಪ್ಲಾನ್ ಮಾಡಿದೆ. ಕೇವಲ ಬಿಜಿಎಂ ಮೂಲಕ ದೃಶ್ಯಗಳನ್ನು ತೋರಿಸಬಹುದು ಎಂದು ಹೇಳಲಾಗುತ್ತಿದೆ.