Thursday, August 27, 2026

BDA Apartments

Home Front Page 2019ರಲ್ಲಿ ಸರ್ಕಾರ ಉರುಳಲು ನಾವೇ ಕಾರಣ: ಬೆಳಗಾವಿಯೀಂದಲೇ ಡಿಕೆಶಿ ರಾಜಕೀಯ ಭವಿಷ್ಯ ಅಂತ್ಯ- ಶಾಸಕ ರಮೇಶ್...

2019ರಲ್ಲಿ ಸರ್ಕಾರ ಉರುಳಲು ನಾವೇ ಕಾರಣ: ಬೆಳಗಾವಿಯೀಂದಲೇ ಡಿಕೆಶಿ ರಾಜಕೀಯ ಭವಿಷ್ಯ ಅಂತ್ಯ- ಶಾಸಕ ರಮೇಶ್ ಜಾರಕಿಹೊಳಿ.

ಬೆಳಗಾವಿ,ಅಕ್ಟೋಬರ್,30,2023(www.justkannada.in): 2019ರಲ್ಲಿ ಸರ್ಕಾರ ಉರುಳಲು ನಾವೇ ಕಾರಣ. 2019ರಲ್ಲಿ ಅನಿವಾರ್ಯ ಇದ್ದಿದ್ದರಿಂದ ಆಪರೇಷನ್ ಮಾಡಿದ್ದೆವು ಎಂದು ಮಾಜಿ ಸಚಿವ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ,  ಡಿಕೆ ಶಿವಕುಮಾರ್ ಸರ್ವಾಧಿಕಾರಿ ಧೋರಣೆ, ಸೊಕ್ಕಿನಿಂದ ಸರ್ಕಾರ ಕೆಡವಿದ್ದೆವು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ವಿರುದ್ಧ ನಾವು ಮಾಡಿಲ್ಲ. ಗ್ಯಾರಂಟಿ ಈಡೇರಿಸಲು ಆಗದಿದ್ದಕ್ಕೆ ಆಪರೇಷನ್ ಕಮಲ ಆರೋಪ ಮಾಡುತ್ತಿದ್ದಾರೆ. ಏನೇ ಇದ್ದರೂ ದಾಖಲೆ ಬಿಡುಗಡೆ ಮಾಡಲಿ ಎಂದು ಕಿಡಿಕಾರಿದರು.

ಆಪರೇಷನ್ ಕಮಲ ಮಾಡುತ್ತಿದ್ದು, 50 ಕೋಟಿ ರೂ. 100 ಕೋಟಿ ಎಂದು ಹೇಳಿ ಡಿಕೆ ಶಿವಕುಮಾರ್ ಕಂಪನಿ  ಬಿಜೆಪಿಗೆ ಕೆಟ್ಟ ಹೆಸರನ್ನು ಕೊಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ನಾವು ಯಾರು ಆಪರೇಷನ್ ಕಮಲದ ಕುರಿತು ಚಕಾರ ಇಟ್ಟಿಲ್ಲ, ಮಾತಾಡಿಲ್ಲ. 2019ರಲ್ಲಿ ಆಪರೇಷನ್ ಮಾಡಿದ್ದೇವೆ.ಆದರೆ ಬಿಜೆಪಿ ಸರ್ಕಾರ ಇದನ್ನ ಮಾಡಿಲ್ಲ ಎಂದರು.

ಬೆಳಗಾವಿ ರಾಜಕಾರಣ ಡಿ ಕೆ ಶಿವಕುಮಾರ್ ಅವರಿಂದಲೇ ಸರ್ಕಾರ ಬೀಳುತ್ತದೆ.  ಡಿಕೆ ಸಿವಕುಮಾರ್  ಬೆಳಗಾವಿಯೀಂದಲೇ ಡಿಕೆಶಿ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ.  ಡಿಕೆ ಶಿವಕುಮಾರ್ ಅಧಿಕಾರದಲ್ಲಿದ್ದಾಗ ಒಂದು ರೀತಿ ಇರ್ತಾರೆ. ವಿಪಕ್ಷದಲ್ಲಿದ್ದಾಗ ಒಂದು ಇರುತ್ತಾರೆ. ಡಿಕೆಶಿ ಇರುವ ಸರ್ಕಾರ ಯಾವಾಗಲೂ ಡೇಂಜರ್. ಬೆಳಗಾವಿಯೀಂದಲೇ ಡಿಕೆಶಿ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂದು ತಿಳಿಸಿದರು.

Key words: We -fall -2019 government – MLA -Ramesh Jarakiholi.