Sunday, August 23, 2026

BDA Apartments

Home Front Page ಆರ್.ಆರ್ ನಗರ ಅನುದಾನ ಕಡಿತ: ಸರ್ಕಾರದ ವಿರುದ್ಧ ಶಾಸಕ ಮುನಿರತ್ನ ಪ್ರತಿಭಟನೆ.

ಆರ್.ಆರ್ ನಗರ ಅನುದಾನ ಕಡಿತ: ಸರ್ಕಾರದ ವಿರುದ್ಧ ಶಾಸಕ ಮುನಿರತ್ನ ಪ್ರತಿಭಟನೆ.

ಬೆಂಗಳೂರು,ಅಕ್ಟೋಬರ್,11,2023(www.justkannada.in):  ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಿದ ಸರ್ಕಾರದ ನಡೆ ಖಂಡಿಸಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಜೆಪಿ ಅವಧಿಯಲ್ಲಿ ನೀಡಲಾಗಿದ್ದ 126 ಕೋಟಿ ರೂ ಅನುದಾನ  ಕಡಿತಗೊಳಿಸಲಾಗಿದೆ. ಬಿಜೆಪಿ ಶಾಸಕರ ಅನುದಾನ ಕಡಿತಗೊಳಿಸಿ ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಲಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಶಾಸಕ ಮುನಿರತ್ನ ಧರಣಿಗೆ ಕುಳಿತಿದ್ದಾರೆ.

ಶಾಸಕ ಮುನಿರತ್ನಗೆ ಇತರೇ ಶಾಸಕರು ಮತ್ತು ಬಿಜೆಪಿ ಮುಖಂಡರು ಸಾಥ್ ನೀಡಿದ್ದು ಅನುಮೋದನೆ ನೀಡಲಾಗಿದ್ದ ಅನುದಾನ ವಾಪಸ್ ಕೊಡುವಂತೆ ಸರ್ಕಾರಕ್ಕೆ ಶಾಸಕ ಮುನಿರತ್ನ ಆಗ್ರಹಿಸಿದ್ದಾರೆ.

Key words: R.R nagar-grant- reduction-MLA Munirantha –protest- against – government.