Sunday, August 23, 2026

BDA Apartments

Home Front Page ತಿರುಮಲದಲ್ಲಿ ಅಕ್ಟೋಬರ್ 15ರಿಂದ 23ರವರೆಗೆ ತಿಮ್ಮಪ್ಪನ ನವರಾತ್ರಿ ಬ್ರಹ್ಮೋತ್ಸವ

ತಿರುಮಲದಲ್ಲಿ ಅಕ್ಟೋಬರ್ 15ರಿಂದ 23ರವರೆಗೆ ತಿಮ್ಮಪ್ಪನ ನವರಾತ್ರಿ ಬ್ರಹ್ಮೋತ್ಸವ

ಬೆಂಗಳೂರು, ಅಕ್ಟೋಬರ್ 05, 2023 (www.justkannada.in): ತಿರುಮಲದಲ್ಲಿ ಅಕ್ಟೋಬರ್ 15ರಿಂದ 23ರವರೆಗೆ ಶ್ರೀವಾರಿ ನವರಾತ್ರಿ ಬ್ರಹ್ಮೋತ್ಸವ ನಡೆಯಲಿದೆ.

ಬ್ರಹ್ಮೋತ್ಸವದ ವೇಳಾಪಟ್ಟಿಯನ್ನು ಟಿಟಿಡಿ ಬಿಡುಗಡೆ ಮಾಡಿದ್ದು,  15ರಿಂದ ತಿರುಮಲದಲ್ಲಿ ಶ್ರೀವಾರಿ ನವರಾತ್ರಿ ಬ್ರಹ್ಮೋತ್ಸವಕ್ಕೆ ಚಾಲನೆ ಸಿಗಲಿದೆ.

ನವರಾತ್ರಿ ಬ್ರಹ್ಮೋತ್ಸವದ ಆರಂಭದಿಂದ ಅಂತ್ಯದವರೆಗೆ ಅಷ್ಟದಳ ಪಾದಪದ್ಮಾರಾಧನೆ, ತಿರುಪ್ಪವಾದ, ಕಲ್ಯಾಣೋತ್ಸವ, ಊಂಜಾಲ್ ಸೇವೆ ಮತ್ತು ಸಹಸ್ರ ದೀಪಾಲಂಕಾರ ಸೇವೆಗಳನ್ನು ರದ್ದುಗೊಳಿಸಲಾಗಿದೆ.

ನವರಾತ್ರಿ ಬ್ರಹ್ಮೋತ್ಸವವು ಅಕ್ಟೋಬರ್ 15 ರಂದು ಸಂಜೆ 7 ರಿಂದ 9 ರವರೆಗೆ ದೊಡ್ಡ ಶೇಷ ವಾಹನದ ಮೇಲೆ ಶ್ರೀವಾರಿಯ ಮೆರವಣಿಗೆಯೊಂದಿಗೆ ಪ್ರಾರಂಭವಾಗಲಿದೆ.

ಅಕ್ಟೋಬರ್ 23 ರಂದು ಶ್ರೀವಾರಿ ಚಕ್ರಸ್ನಾನದೊಂದಿಗೆ ಉತ್ಸವವು ಕೊನೆಗೊಳ್ಳಲಿದೆ ಎಂದು ಟಿಟಿಡಿ ತಿಳಿಸಿದ್ದು, ಬ್ರಹ್ಮೋತ್ಸವ ಸೇವಾ ಟಿಕೆಟ್ ಕಾಯ್ದಿರಿಸಿದ ಭಕ್ತರಿಗೆ ನಿಗದಿತ ವಾಹನ ಸೇವೆಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ.