Saturday, August 1, 2026

BDA Apartments

Home Front Page ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ: ಎಲ್ಲಾ ಜಾತಿಯ ಜನರು ಇರುವ ಏಕೈಕ ಪಕ್ಷ ಕಾಂಗ್ರೆಸ್-...

ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ: ಎಲ್ಲಾ ಜಾತಿಯ ಜನರು ಇರುವ ಏಕೈಕ ಪಕ್ಷ ಕಾಂಗ್ರೆಸ್- ಸಚಿವ ಕೆ.ಜೆ ಜಾರ್ಜ್.

ಹಾಸನ,ಅಕ್ಟೋಬರ್,4,2023(www.justkannada.in): ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ. ದೇಶದಲ್ಲಿ ಎಲ್ಲಾ ಜಾತಿಯ ಜನರು ಇರುವ ಏಕೈಕ ಪಕ್ಷ ಅಂದ್ರೆ ಕಾಂಗ್ರೆಸ್ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಜೆ ಜಾರ್ಜ್,  ಕಾಂಗ್ರೆಸ್ ಪಕ್ಷದಲ್ಲಿ ಜಾತಿ ಇಲ್ಲ ನಮ್ಮದು ಕಾಂಗ್ರೆಸ್ ಪಕ್ಷವೇ ಒಂದು ಜಾತಿ. ನಮ್ಮಲ್ಲಿ ಲಿಂಗಾಯತ, ಒಕ್ಕಲಿಗರು, ದಲಿತರು, ಹಿಂದುಳಿದವರು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಇದ್ದಾರೆ. ಎಲ್ಲಾ ಜಾತಿಯ ಜನರು ಇರೋ ಏಕೈಕ ಪಕ್ಷ ಇಂಡಿಯಾದಲ್ಲಿ ಕಾಂಗ್ರೆಸ್ ಒಂದೇ. ಜಾತಿ ಮೇಲೆ ನಾವು ರಾಜಕಾರಣ ಮಾಡೋದಿಲ್ಲ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಮ್ಮ ರಾಜ್ಯದಲ್ಲಿ 34 ಲಕ್ಷ ನೀರಾವರಿ ಪಂಪ್ ಸೆಟ್ ಇವೆ. ಇತ್ತೀಚೆಗೆ ಮಳೆ ಇಲ್ಲದೆ ವಿದ್ಯುತ್​ಗೆ ಬೇಡಿಕೆ ಹೆಚ್ಚಾಗಿದೆ. ಈ ವರ್ಷ ನಮಗೆ ಸೆಪ್ಟೆಂಬರ್ ನಲ್ಲೇ ಪೀಕ್ ಅವರ್ ಶುರುವಾಗಿದೆ. ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಥರ್ಮಲ್ ಪವರ್ ಉತ್ಪಾದನೆ ಶುರು ಮಾಡಿ ಸದ್ಯ ಕೊರತೆ ಆಗದಂತೆ ಮಾಡಿದ್ದೇವೆ ಎಂದು ಸಚಿವ ಕೆಜೆ ಜಾರ್ಜ್ ತಿಳಿಸಿದರು.

Key words: Congress – only party – people – all castes – Minister- KJ George.