Sunday, August 23, 2026

BDA Apartments

Home Front Page ರಿಂಗ್ ರಸ್ತೆ ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿ ಆಚರಣೆ.

ರಿಂಗ್ ರಸ್ತೆ ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿ ಆಚರಣೆ.

ಮೈಸೂರು,ಅಕ್ಟೋಬರ್,2,2023(www.justkannada.in): ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ಇಂದು ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ(ರಿ), ಶ್ರೀರಾಂಪುರ ಪಟ್ಟಣ ಪಂಚಾಯಿತಿ, ವಿಶ್ವವಿದ್ಯಾನಿಲಯ ಬಡಾವಣೆ ನಿವಾಸಿಗಳ ಸಂಘ,  ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳು ಸೇರಿ 4 ಕಿ.ಮೀ ಸ್ವಚ್ಛ ಮಾಡುವ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು.

ಈ‌ ಸಂದರ್ಭದಲ್ಲಿ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಆರೋಗ್ಯಾಧಿಕಾರಿ ಪರಮೇಶ್ವರ್, ಸಮುದಾಯ ಅಧಿಕಾರಿ ಶ್ರೀನಿವಾಸ್,  ಕಂದಾಯ ಅಧಿಕಾರಿ ಕುಮಾರ್, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷ ಕೆ.ಆರ್.ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಪುನೀತ್, ರಾಮಕೃಷ್ಣ, ಪಾರ್ಶ್ವನಾಥ್ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳು, , NSS ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯ ಬಡಾವಣೆಯ ನಾಣಯ್ಯ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

Key words: Celebrating- Gandhi Jayanti -cleaning -Ring Road-mysore