Friday, August 14, 2026

BDA Apartments

Home Front Page  ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ವಿತರಣೆ- ಆಹಾರ ಸಚಿವ ಕೆ.ಎಚ್ ಮುನಿಯಪ್ಪ.

 ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ವಿತರಣೆ- ಆಹಾರ ಸಚಿವ ಕೆ.ಎಚ್ ಮುನಿಯಪ್ಪ.

ಬೆಂಗಳೂರು,ಸೆಪ್ಟಂಬರ್,28,2023(www.justkannada.in): ಅನ್ನಭಾಗ್ಯ ಯೋಜನೆಯಡಿ 5ಕೆಜಿ ಅಕ್ಕಿ ಜೊತೆಗೆ  5 ಕೆಜಿ ಹೆಚ್ಚುವರಿ ಅಕ್ಕಿಗೆ ಬದಲಾಗಿ ಹಣವನ್ನ ನೀಡಲಾಗುತ್ತಿತ್ತು. ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿಯನ್ನ ನೀಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಅಕ್ಕಿ ಖರೀದಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ತಿಂಗಳಿಂದ ಹಣದ ಬದಲಾಗಿ ಪೂರ್ಣ 10 ಕೆಜಿ ಅಕ್ಕಿ  ನೀಡುತ್ತೇವೆ. ಎಲ್ಲ ಸದಸ್ಯರಿಗೂ ತಲಾ 10 ಕೆ.ಜಿ. ಅಕ್ಕಿ ನೀಡುತ್ತೇವೆ. ಈಗಾಗಲೇ ಅಕ್ಕಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಇನ್ನು ಮೊದಲನೆಯದಾಗಿ ಆರಂಭದಲ್ಲಿ ಬರಪೀಡಿತವೆಂದು ಘೋಷಣೆ ಮಾಡಲಾದ ತಾಲೂಕಿನಲ್ಲಿ ಹಣದ ಬದಲು ಅಕ್ಕಿ ಕೊಡುತ್ತೇವೆ ಎಂದು  ತಿಳಿಸಿದರು.

Key words: 10 kg-rice -distribution – next month- Food Minister- KH Muniappa.