Sunday, August 23, 2026

BDA Apartments

Home Front Page ಇಂದು ವಿಶ್ವಕರ್ಮ ಜಯಂತಿ: ‘ಪಿಎಂ ವಿಶ್ವಕರ್ಮ’ ಯೋಜನೆಗೆ ಪ್ರಧಾನಿ ಚಾಲನೆ

ಇಂದು ವಿಶ್ವಕರ್ಮ ಜಯಂತಿ: ‘ಪಿಎಂ ವಿಶ್ವಕರ್ಮ’ ಯೋಜನೆಗೆ ಪ್ರಧಾನಿ ಚಾಲನೆ

ಬೆಂಗಳೂರು, ಸೆಪ್ಟೆಂಬರ್ 17, 2023 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ‘ಪಿಎಂ ವಿಶ್ವಕರ್ಮ’ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಹೌದು. ಇಂದು ವಿಶ್ವಕರ್ಮ ಜಯಂತಿ ದಿನವಾಗಿದ್ದು, ಇದರ ಅಂಗವಾಗಿ ನರೇಂದ್ರ ಮೋದಿಯವರು ‘ಪಿಎಂ ವಿಶ್ವಕರ್ಮ’ ಯೋಜನೆಗೆ ನವದೆಹಲಿಯ ದ್ವಾರಕಾದ ಯಶೋಭೂಮಿಯಲ್ಲಿ ಚಾಲನೆ ನೀಡಲಿದ್ದಾರೆ.

ಈ ಯೋಜನೆ ಅಡಿ ವಿಶ್ವಕರ್ಮ ಜನಾಂಗದವರಿಗೆ ಮೂರು ಲಕ್ಷ ರೂಪಾಯಿವರೆಗೆ ಆಧಾರ ರಹಿತ ಸಾಲ, 15 ಸಾವಿರ ರೂಪಾಯಿಗಳವರೆಗಿನ ಟೂಲ್ ಕಿಟ್ ನೀಡಲಾಗುತ್ತದೆ.

ಕೌಶಲಾಭಿವೃದ್ಧಿಗೆ ತರಬೇತಿ ಮತ್ತು ದೈನಂದಿನ 500 ರೂಪಾಯಿ ಸಂಭಾವನೆ, ಸಂಪೂರ್ಣ ತಯಾರಾದ ಉತ್ಪನ್ನಗಳಿಗೆ ಕ್ವಾಲಿಟಿ ಸರ್ಟಿಫಿಕೇಷನ್, ಬ್ರಾಂಡಿಂಗ್ ಮತ್ತು ಜಾಹೀರಾತು ಮಾದರಿಯಲ್ಲಿ ಮಾರ್ಕೆಟಿಂಗ್ ನೆರವು ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿವೆ.