Saturday, August 22, 2026

BDA Apartments

Home Front Page ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ- ಮಾಜಿ ಸಚಿವ ಸಿ.ಟಿ ರವಿ.

ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ- ಮಾಜಿ ಸಚಿವ ಸಿ.ಟಿ ರವಿ.

ನವದೆಹಲಿ, ಸೆಪ್ಟೆಂಬರ್​ 15,2023(www.justkannada..in): ಬಿಜೆಪಿ ಟಿಕೆಟ್ ಕೊಡಿಸುವುದಾಗಿ  ಉದ್ಯಮಿ ಬಳಿ ಹಣ ಪಡೆದು ಚೈತ್ರಾ ಕುಂದಾಪುರ ಗ್ಯಾಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಿ.ಟಿ ರವಿ,  ಇಲ್ಲಿ ಸಂದರ್ಭ ದುರ್ಬಳಕೆ ಆಗಿದೆ. ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಹೇಳಿದರು.

ದೆಹಲಿಯಲ್ಲಿ ಇಂದು ಮಾಧ್ಯಮದವಗಳ ಜೊತೆ  ಮಾತನಾಡಿದ  ಸಿ.ಟಿ ರವಿ, ಮೋಸ ಹೋಗುವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ. ಬಿಜೆಪಿಯಲ್ಲಿ ಹಣ ಕೊಟ್ಟು ಟಿಕೆಟ್ ಖರೀದಿಸಲು ಸಾಧ್ಯವಿಲ್ಲ. ಹಣ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಯಾರೂ ಮಾಡಬಾರದು. ಒಂದು ವೇಳೆ‌ ಯತ್ನಿಸಿದರೆ ಮತ್ತೊಬ್ಬ ಗೋವಿಂದಬಾಬು ಪೂಜಾರಿ ಆಗುತ್ತೀರಿ ಎಂದು ತಿಳಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಬಿಜೆಪಿ ಹಿರಿಯ ನಾಯಕರು ಮೈತ್ರಿ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ನಾನು ದೇವೇಗೌಡರು, ಯಡಿಯೂರಪ್ಪ ಹೇಳಿಕೆ‌ ಗಮನಿಸಿದ್ದೇನೆ. ನನ್ನಂತಹ ಕಾರ್ಯಕರ್ತ ಪಕ್ಷದ ನಿರ್ಧಾರವನ್ನು ಜಾರಿ ಮಾಡುತ್ತೇನೆ. ಸಾಧಕ ಬಾಧಕ ಕೇಳಿದರೆ ವರಿಷ್ಠರಿಗೆ ನಮ್ಮ ಅನುಭವ ತಿಳಿಸುತ್ತೇವೆ. ಈ ಹಿಂದೆ ಜೆಡಿಎಸ್, ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಏನಾಗುತ್ತದೆ ಎಂದು ಭವಿಷ್ಯ ಹೇಳುವುದು ಸೂಕ್ತವಲ್ಲ ಎಂದರು.

Key words: chaitra kundapur fraud case- BJP- Former Minister- CT Ravi.