Sunday, September 20, 2026

BDA Apartments

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಯೋಚನೆ ಇಲ್ಲ- ಶಾಸಕ ಎಸ್.ಟಿ ಸೋಮಶೇಖರ್ BDA ...
Home Front Page ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಯೋಚನೆ ಇಲ್ಲ- ಶಾಸಕ ಎಸ್.ಟಿ ಸೋಮಶೇಖರ್.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಯೋಚನೆ ಇಲ್ಲ- ಶಾಸಕ ಎಸ್.ಟಿ ಸೋಮಶೇಖರ್.

ಬೆಂಗಳೂರು,ಸೆಪ್ಟಂಬರ್,14,2023(www.justkannada.in): ನನಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಯೋಚನೆ  ಬಂದಿಲ್ಲ ಎಂದು ಮಾಜಿಸಚಿವ ಹಾಗೂ ಶಾಸಕ ಎಸ್.ಟಿ ಸೋಮಶೇಖರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಟಿ ಸೋಮಶೇಖರ್,  ನಾನು ಬಿಜೆಪಿಯಲ್ಲಿ ಇದ್ದೇನೆ ನಾನು ಸೈಲೆಂಟ್ ಆಗಿಲ್ಲ. ನನಗೆ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಹೋಗುವ ಯೋಚನೆ ಇಲ್ಲ. ಸಚಿವ ರಾಮಲಿಂಗರೆಡ್ಡಿ ಜೊತೆ ರಾಜಕೀಯದ ಬಗ್ಗೆ ಮಾತನಾಡಿಲ್ಲ.  ಬಸ್ ನಿಲ್ದಾಣಗಳ ಸಮಸ್ಯೆ ಹೇಳಿಕೊಳ್ಳಲು ಸಚಿವರನ್ನ ಕರೆಸಿದ್ದವು.   ಜನವರಿಗೆ  ಟಿಟಿಎಂಸಿ ಉದ್ಘಾಟಿಸೋಣ ಎಂದಿದ್ದಾರೆ ಎಂದರು.ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಯೋಚನೆ ಇಲ್ಲ st soma

ಪಕ್ಷದ ಕಾರ್ಯಕ್ರಮಗಳಿಗೆ ಗೈರಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್,  ವೈಯಕ್ತಿಕ ಕಾರಣಗಳಿಂದ ಪಕ್ಷದ ಕಾರ್ಯಕ್ರಮಗಳಿಗೆ ಗೈರಾಗುತ್ತಿದ್ದೇನೆ ಎಂದು ತಿಳಿಸಿದರು.

Key words: No leave- BJP – join -Congress – MLA -ST Somashekhar.