ಚಾಮರಾಜನಗರ,ಸೆ,1,2019(www.justkannada.in): ಜಮೀನಿನಿಂದ ಎತ್ತು ಗಳೊಂದಿಗೆ ವಾಪಸ್ ಬರುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ ಪರಿಣಾಮ ರೈತ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಎಲಚಟ್ಟಿ ಬಳಿ ಈ ಘಟನೆ ಸಂಭವಿಸಿದೆ.ವಚೌಡಹಳ್ಳಿ ಗ್ರಾಮದ ಶಿವಮಾದಯ್ಯ(55) ಮೃತ ಪಟ್ಟ ರೈತ. ಎಲಚಟ್ಟಿ ಗ್ರಾಮದಿಂದ ಎತ್ತು ಗಳೊಂದಿಗೆ ಚೌಡಹಳ್ಳಿಗೆ ವಾಪಸ್ ಬರುವಾಗ ಬಂಡೀಪುರ ಕಾಡಂಚಿನ ಹುಲಿಯಮ್ಮನ ದೇವಸ್ಥಾನ ರಸ್ತೆಯ ಬಳಿ ಹುಲಿ ದಾಳಿ ನಡೆಸಿದೆ. ಹುಲಿದಾಳಿಗೆ ಸಿಲುಕಿ ರೈತ ಶಿವಮಾದಯ್ಯ ಮೃತಪಟ್ಟಿದ್ದಾರೆ
ನಿನ್ನೆ ಸಂಜೆ ಹುಲಿದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಬಂಡೀಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Farmer –death – tiger –attack- Chamarajanagar






