Sunday, August 23, 2026

BDA Apartments

Home Front Page ಸಿಎಂ ಸಿದ್ಧರಾಮಯ್ಯಗೆ ಮತ್ತೆ ಪತ್ರ ಬರೆದ ಶಾಸಕ ಬಸವರಾಜ ರಾಯರೆಡ್ಡಿ.

ಸಿಎಂ ಸಿದ್ಧರಾಮಯ್ಯಗೆ ಮತ್ತೆ ಪತ್ರ ಬರೆದ ಶಾಸಕ ಬಸವರಾಜ ರಾಯರೆಡ್ಡಿ.

ಕೊಪ್ಪಳ,ಸೆಪ್ಟಂಬರ್,2,2023(www.justkannada.in):   ಸಿಎಂ ಸಿದ್ಧರಾಮಯ್ಯಗೆ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ‌ ಇದೀಗ ಮತ್ತೆ ಪತ್ರ ಬರೆದಿದ್ದಾರೆ.

ಕಳೆದ ಬಾರಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದ ಶಾಸಕ ಬಸವರಾಜ ರಾಯರೆಡ್ಡಿ ಇದೀಗ  ಅಧಿಕಾರಿಗಳ ಸಭೆ ಕರೆಯಲು ಒತ್ತಾಯಿಸಿ ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದಿದ್ದಾರೆ ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆಯಲು ಆಗ್ರಹಿಸಿದ್ದಾರೆ. .

ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆಯಲು ಅವರು ಒತ್ತಾಯ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ತಮ್ಮ ಅಧೀನ ಕಿರಿಯ ಅಧಿಕಾರಿಗಳ ಮಾತನ್ನೂ ಕೇಳುತ್ತಿಲ್ಲ ಅವರು. ಕಿರಿಯ ಅಧಿಕಾರಿಗಳು ಕೆಲಸಗಳು ಆಗದೆ ಅಸಹಾಯಕತೆ ತೋಡಿಕೊಂಡಿದ್ದಾರೆ. ನನ್ನ ಸೂಚನೆಗೂ ಹಿರಿಯರು ಕ್ಯಾರೇ ಅನ್ನುತ್ತಿಲ್ಲ ಎಂಬುದಾಗಿ ಶಾಸಕ ರಾಯರೆಡ್ಡಿ ಪತ್ರ ಮುಖೇನ ಸಿಎಂ ಗಮನ ಸೆಳೆದಿದ್ದಾರೆ ಎನ್ನಲಾಗಿದೆ.

ಜೆಸ್ಕಾಂ ವ್ಯಾಪ್ತಿಯಲ್ಲಿ ಟ್ರಾನ್ಸ್​ಫಾರ್ಮರ್ ಅವಳಡಿಕೆಯಾಗುತ್ತಿಲ್ಲ. ಯಲಬುರ್ಗಾ ಕ್ಷೇತ್ರವೊಂದಕ್ಕೆ 200 ಟ್ರಾನ್ಸ್​ಫಾರ್ಮರ್ ​ಗಳ ಅಗತ್ಯವಿದೆ. ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ, ಅವರಿಂದ ಕೆಲಸ ಸಾಧ್ಯವಾಗುತ್ತಿಲ್ಲ. ಇದರಿಂದ ರೈತರ ಜಮೀನಿಗೆ ವಿದ್ಯುತ್ ನೀಡುವುದಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆದು ಚರ್ಚಿಸುವಂತೆ ಅವರು ಒತ್ತಾಯ ಮಾಡಿದ್ದಾರೆ.

Key words: MLA- Basavaraja Rayareddy –letter- CM Siddaramaiah- again.