Friday, August 21, 2026

BDA Apartments

Home Front Page ವೈಯಕ್ತಿಕ ತೇಜೋವಧೆ ಸರಿಯಲ್ಲ- ಡಿ.ಕೆ ಶಿವಕುಮಾರ್ ವಿರುದ್ಧ ಅಶ್ವಥ್ ನಾರಾಯಣ್ ಕಿಡಿ.

ವೈಯಕ್ತಿಕ ತೇಜೋವಧೆ ಸರಿಯಲ್ಲ- ಡಿ.ಕೆ ಶಿವಕುಮಾರ್ ವಿರುದ್ಧ ಅಶ್ವಥ್ ನಾರಾಯಣ್ ಕಿಡಿ.

ಬೆಂಗಳೂರು,ಆಗಸ್ಟ್,14,2023(www.justkannada.in): ತಮ್ಮನ್ನು ನವರಂಗಿ ನಾರಾಯಣ ಎಂದು ಟೀಕಿಸಿದ್ದ ಡಿಸಿಎಂ ಡಿ.ಕೆ ಶಿವಕುಮಾರ್  ಮಾಜಿ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾನಾಡಿರುವ ಅವರು, ವೈಯಕ್ತಿವಾಗಿ ತೇಜೋವಧೆ ಮಾಡುವುದು ಸರಿಯಲ್ಲ. ನನಗೆ ಯಾರ ಮೇಲೂ ವೈಯಕ್ತಿವಾಗಿ ದ್ವೇಷ ಇಲ್ಲ. ರಾಮನಗರದಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ, ಸ್ವಯಂ ಅಭಿವೃದ್ದಿಯಾಗಿದೆ. ರಾಮನಗದಲ್ಲಿ ರಾಮನದೇವಾಲಯ ಮಾಡಲು ಬಿಜೆಪಿಯೇ ಬರಬೇಕಾ? ಇವರ ಕೈಯಲ್ಲಿ ದೇವಾಲಯ ಮಾಡಲು ಆಗುವುದಿಲ್ವಾ? ಎಂದು ಕಿಡಿಕಾರಿದರು.

ನಾವು ಪ್ರೀತಿ ಮತ್ತು ಗೌರವ ಕೊಡಲು ಸದಾ ಸಿದ್ದರಾಗಿದೇವೆ. ಬೆಂಗಳೂರು ನಮ್ಮ ಜೀವಾಳ, ಬೆಂಗಳೂರಿಗೆ ವಿಶ್ವದಲ್ಲಿ ಹೆಸರಿದೆ. ಇವರಿಗೆ ಬೆಂಗಳೂರಿಗೆ ಏನ್ ಸಂಬಂಧ? ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.

Key words: navarangi narayana-Personal – not – DK Shivakumar -Ashwath Narayan.