Saturday, October 17, 2026

Dasara Wishes

Happy Dasara
Home Front Page ಗೃಹಜ್ಯೋತಿಗೆ 1.43 ಕೋಟಿ ಜನರಿಂದ ಅರ್ಜಿ: 200 ಯೂನಿಟ್​ ಗಿಂತ ಹೆಚ್ಚು ಬಳಸಿದ್ರೆ ಅರ್ಜಿ ರಿಜೆಕ್ಟ್-...

ಗೃಹಜ್ಯೋತಿಗೆ 1.43 ಕೋಟಿ ಜನರಿಂದ ಅರ್ಜಿ: 200 ಯೂನಿಟ್​ ಗಿಂತ ಹೆಚ್ಚು ಬಳಸಿದ್ರೆ ಅರ್ಜಿ ರಿಜೆಕ್ಟ್- ಇಂಧನ ಸಚಿವ ಕೆ.ಜೆ ಜಾರ್ಜ್.

ಬೆಂಗಳೂರು,ಆಗಸ್ಟ್,1,2023(www.justkannada.in): ಗೃಹಜ್ಯೋತಿ ಯೋಜನೆಗೆ 1.43 ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದು, 200 ಯೂನಿಟ್​ ಗಿಂತ ಹೆಚ್ಚು ಬಳಸಿದ್ರೆ ಅರ್ಜಿ ರಿಜೆಕ್ಟ್ ಆಗಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್,  ‘ಗೃಹಜ್ಯೋತಿ’ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಆ.5ರಂದು ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆ ಉದ್ಘಾಟನಾಯಾಗಲಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ತಾರೆ ಎಂದು ತಿಳಿಸಿದರು.

200 ಯೂನಿಟ್​ಯೊಳಗೆ ವಿದ್ಯುತ್​ ಬಳಸಿದ್ರೆ ಬಿಲ್ ಪಾವತಿಸುವಂತಿಲ್ಲ. ಒಂದು ವರ್ಷದ ಸರಾಸರಿ ವಿದ್ಯುತ್ ಬಿಲ್ ಪರಿಗಣಿಸಿ ಉಚಿತ ವಿದ್ಯುತ್​ ನೀಡಲಾಗುತ್ತೆ. 200 ಯೂನಿಟ್​ನಿಂತ ಹೆಚ್ಚು ಬಳಸಿದರೆ ಅರ್ಜಿ ರಿಜೆಕ್ಟ್ ಆಗಲಿದೆ ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.

ಜುಲೈ 27ರೊಳಗೆ ಅರ್ಜಿ ಸಲ್ಲಿಸಿದ್ದರೇ ಜುಲೈ ತಿಂಗಳ ಉಚಿತ ವಿದ್ಯುತ್ ಸಿಗಲಿದೆ. ಜು.27ರ ನಂತರ ಅರ್ಜಿ ಸಲ್ಲಿಸಿದರೇ ಜುಲೈ ತಿಂಗಳ ವಿದ್ಯುತ್ ಬಿಲ್ ಕಟ್ಟಬೇಕು ಎಂದು ತಿಳಿಸಿದರು.

Key words: Application – 1.43 crore- people – Grihajyoti- Energy Minister- KJ George.