Saturday, August 15, 2026

BDA Apartments

Home Crime ನಕಲಿ ನೋಟು ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್: 6 ಲಕ್ಷಕ್ಕೂ ಅಧಿಕ ನಕಲಿ ನೋಟು ವಶಕ್ಕೆ.

ನಕಲಿ ನೋಟು ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್: 6 ಲಕ್ಷಕ್ಕೂ ಅಧಿಕ ನಕಲಿ ನೋಟು ವಶಕ್ಕೆ.

ಬೆಂಗಳೂರು,ಜುಲೈ,31,2023(www.justkannada.in): ನಕಲಿ ನೋಟು ಮಾರಾಟ ಮಾಡುತ್ತಿದ್ದ ಆರೋಪಿಯನ್ನ ನಗರದ ಕಾಟನ್ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸರವಣ ಬಂಧಿತ ಆರೋಪಿ. ಈತ  ಇನ್ ಸ್ಟಾಗ್ರಾಮ್ ನಲ್ಲಿ ಫೇ‍ಕ್ ಐಡಿ ರಚಿಸಿ ಗ್ರಾಹಕರಿಗೆ ಗಾಳ  ಹಾಕುತ್ತಿದ್ದ. ಎಲ್ಲವನ್ನೂ ಇನ್ ಸ್ಟಾಗ್ರಾಂ ಮೂಲಕವೇ ವ್ಯವಹರಿಸುತ್ತಿದ್ದ. ಇದೀಗ ಆರೋಪಿ ಸರವಣನನ್ನ ಪೊಲೀಸರು ಬಂಧಿಸಿದ್ದಾರೆ. ನಕಲಿ ನೋಟು ಪಡೆದ ಕೇರಳಾ ಮೂಲದ ಆರೋಪಿಗಳನ್ನೂ ಅರೆಸ್ಟ್ ಮಾಡಲಾಗಿದೆ.

ಬಂಧಿತರಿಂದ   6 ಲಕ್ಷಕ್ಕ ಅಧಿಕ ನಕಲಿ ನೋಟನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Key words: arrest-accused – fake notes- seized.