ಮೈಸೂರು,ಜುಲೈ,31,2023(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಜಿ20 ಶೃಂಗಸಭೆಯ ಪೂರ್ವಭಾವಿ ಸಭೆ ನಡೆಯಲಿದೆ.![]()
ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಿ20ಯ 250 ಸದಸ್ಯರು ಈಗಾಗಲೇ ಮೈಸೂರಿಗೆ ಬಂದಿಳಿದಿದ್ದು ರ್ಯಾಡಿಷನ್ ಬ್ಲೂ,ಗ್ರ್ಯಾಂಡ್ ಮರ್ಕ್ಯೂರಿ ಹೊಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.
ಜಿ20ಯ ಸದಸ್ಯರು ಮೈಸೂರು ಅರಮನೆ, ಕೆಆರ್‌ಎಸ್, ಸೋಮನಾಥಪುರ ದೇವಾಲಯಕ್ಕೆ ಭೇಟಿ ನೀಡಲಿದ್ದು ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಪೊಲೀಸರಿಂದ ಬಿಗಿ ಭದ್ರತೆ ವಹಿಸಲಾಗಿದೆ. ಇನ್ನು ಈ ಶೃಂಗಸಭೆಯಲ್ಲಿ ಪಾರಂಪರಿಕತೆ ಬಗ್ಗೆ ಸಮಾಲೋಚನೆ ನಡೆಯಲಿದೆ.
Key words: G20 summit- meeting – Mysore – today.







