Friday, August 14, 2026

BDA Apartments

Home Front Page ಬದಲಾಯ್ತು ಟ್ವಿಟ್ಟರ್ ಹಕ್ಕಿ ! ಆ ಜಾಗಕ್ಕೆ ಬಂದಿದೆ ‘ಎಕ್ಸ್’ !

ಬದಲಾಯ್ತು ಟ್ವಿಟ್ಟರ್ ಹಕ್ಕಿ ! ಆ ಜಾಗಕ್ಕೆ ಬಂದಿದೆ ‘ಎಕ್ಸ್’ !

ಬೆಂಗಳೂರು, ಜುಲೈ 30, 2023 (www.justkannada.in): ಉದ್ಯಮಿ ಎಲಾನ್ ಮಸ್ಕ್‌ ಈಗ ಟ್ವಿಟ್ಟರ್ ಲೋಗೋವನ್ನು ಬದಲಾಯಿಸಿದ್ದಾರೆ.

ಟ್ವಿಟ್ಟರ್ ಲೋಗೊ ಹಾಗೂ ಅದರ ಹೆಸರನ್ನು ಬದಲಾಯಿಸಲಾಗುತ್ತದೆ ಎಂದು ದಿನಗಳ ಹಿಂದಷ್ಟೇ ಸುದ್ದಿ ಹಬ್ಬಿತ್ತು. ಈಗ ಅದು ನಿಜವಾಗಿದ್ದು, ಹಕ್ಕಿ ಇದ್ದ ಜಾಗದಲ್ಲಿ ಎಕ್ಸ್‌ ಚಿಹ್ನೆ ಬಂದಿದೆ.

ಅಂದಹಾಗೆ 2022ರ ಅಕ್ಟೋಬರ್‌ನಲ್ಲಿ ಟ್ವೀಟರ್‌ ಕಂಪನಿಯನ್ನು ಖರೀದಿಸಿದ ಬಳಿಕ ಹಲವಾರು ಬದಲಾವಣೆಗಳನ್ನು ಮಸ್ಕ್ ಅವರು ತಂದಿದ್ದಾರೆ.  ಅಲ್ಪಾವಧಿಗೆ ಟ್ವೀಟರ್‌ ಲೋಗೋದಲ್ಲಿ ಹಕ್ಕಿಗಳ ಬದಲಾಗಿ ನಾಯಿಯ ಚಿತ್ರವನ್ನೂ ಅವರು ಅಳವಡಿಸಿ ಟೀಕೆ ಎದುರಿಸಿದ್ದರು.

ಮಸ್ಕ್ ತೆಕ್ಕೆಗೆ ಬರುವ ಮುನ್ನ ಟ್ವೀಟರ್‌ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಯಾಗಿತ್ತು. ಆದರೆ ಈಗ ಅದು ಮಸ್ಕ್‌ ಅವರು ಅಧ್ಯಕ್ಷರಾಗಿರುವ ಎಕ್ಸ್‌ ಕಾಪರ್‌ ಅಡಿ ಇರುವ ಒಂದು ಅಂಗಸಂಸ್ಥೆಯಾಗಿದೆ.

-V.Mahesh kumar