Thursday, August 13, 2026

BDA Apartments

Home Front Page ಅಧಿಕಾರಕ್ಕೆ ಬಂದ 2 ತಿಂಗಳೊಳಗೆ ಕೈ ಸರಕಾರದಲ್ಲಿ ಅಪಸ್ವರ: ಶಾಸಕ ಜಿಟಿಡಿ ಟೀಕೆ

ಅಧಿಕಾರಕ್ಕೆ ಬಂದ 2 ತಿಂಗಳೊಳಗೆ ಕೈ ಸರಕಾರದಲ್ಲಿ ಅಪಸ್ವರ: ಶಾಸಕ ಜಿಟಿಡಿ ಟೀಕೆ

ಬೆಂಗಳೂರು, ಜುಲೈ 26, 2023 (www.justkannada.in): ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಯಾವುದೇ ಉದ್ದೇಶ ನಮಗಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಕೇವಲ 19 ಶಾಸಕರನ್ನು ಹೊಂದಿರುವ ನಾವು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಯಾವುದೇ ಉದ್ದೇಶ ನಮಗಿಲ್ಲ. ಜೆಡಿಎಸ್ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರ ಹಿಡಿದು 2 ತಿಂಗಗಳೊಳಗೆ ಕೈ ಸರಕಾರದಲ್ಲಿ ಅಪಸ್ವರ ಎದ್ದಿದೆ ಎಂದು ಜಿಟಿಡಿ ಟೀಕಿಸಿದರು.

ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ 4 ರಷ್ಟು ಮೀಸಲಾತಿಯನ್ನು ಹಿಂದಿನ ಸರ್ಕಾರ ರದ್ದುಪಡಿಸಿತ್ತು. ಈ ಮೀಸಲಾತಿಯನ್ನು ಮೊದಲು ಜಾರಿ ಮಾಡುವುದಾಗಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮರುಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾವು ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಬಿಚ್ಚು ಮನಸ್ಸಿನಿಂದ ಚರ್ಚಿಸಿದ್ದೇವೆ. ಸ್ವತಂತ್ರವಾಗಿ ಪಕ್ಷ ಕಟ್ಟಬೇಕು ಅಷ್ಟೇ ಎಂದು ದೇವೇಗೌಡರು ಹೇಳಿದ್ದಾರೆ. ಅವರು ಯಾವ ತೀರ್ಮಾನ ತೆಗೆದುಕೊಂಡರೂ ನಾವು ಬದ್ಧ ಎಂದರು.