Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Crime ಜಿಂಕೆ ಮಾಂಸ ಸಾಗಣೆ: ಅರಣ್ಯಾಧಿಕಾರಿಗಳಿಂದ ಕಾಡುಗಳ್ಳರಿಬ್ಬರ ಬಂಧನ.

ಜಿಂಕೆ ಮಾಂಸ ಸಾಗಣೆ: ಅರಣ್ಯಾಧಿಕಾರಿಗಳಿಂದ ಕಾಡುಗಳ್ಳರಿಬ್ಬರ ಬಂಧನ.

ಹನೂರು,ಜುಲೈ,20,2023(www.justkannada.in): ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ  ಇಬ್ಬರು ಕಾಡುಗಳ್ಳರನ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ಕೃಷ್ಣಮೂರ್ತಿ ಮತ್ತು ಓರ್ವ ಬಾಲಕ ಬಂಧಿತ ಆರೋಪಿಗಳು. ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶಿಸಿ ಜಿಂಕೆಯನ್ನ ಬೇಟೆಯಾಡಿ ಕೊಂದು ಮಾಂಸ ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ  ಕೌದಳ್ಳಿ ವಲಯ ಅರಣ್ಯಾಧಿಕಾರಿ ಸುಂದರ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನ ಬಂಧಿಸಿದ್ದಾರೆ.ಜಿಂಕೆ ಮಾಂಸ ಸಾಗಣೆ: ಅರಣ್ಯಾಧಿಕಾರಿಗಳಿಂದ ಕಾಡುಗಳ್ಳರಿಬ್ಬರ ಬಂಧನ arrest arrest 1

ಜಿಂಕೆ ಬೇಟೆಗೆ ಬಳಸಿದ್ದ ಪರಿಕರಗಳ ವಶಕ್ಕೆ ಪಡೆಯಲಾಗಿದ್ದು,  ರಾಮಾಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Key words: venison-Arrest – two -thieves -forest officials.