Wednesday, August 12, 2026

BDA Apartments

Home Front Page ನಿನ್ನೆಯ ಸದನದಲ್ಲಿನ ಘಟನೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ನಿನ್ನೆಯ ಸದನದಲ್ಲಿನ ಘಟನೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಜುಲೈ,20,2023(www.justkannada.in):  ನಿನ್ನೆ ಸದನದಲ್ಲಿ ನಡೆದ ಹೈಡ್ರಾಮಾ, ಗಲಾಟೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಿನ್ನೆಯ ಬೆಳವಣಿಗೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ. ಐಎಎಸ್​​ ಅಧಿಕಾರಿಗಳ ದುರುಪಯೋಗ ಬಗ್ಗೆ ನಿನ್ನೆ ಸದನದಲ್ಲಿ ಬಿಜೆಪಿ ಸದಸ್ಯರು ಪ್ರಸ್ತಾಪ ಮಾಡಿದ್ದರು. ಆಡಳಿತ ಪಕ್ಷದವರು ತಪ್ಪೆ ಮಾಡಿಲ್ಲ ಅಂತಾ ಉದ್ಧಟತನ ತೋರಿದರು. ಹೀಗಾಗಿ ಈ ಘಟನೆ ನಡೆದಿದೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

ನಿನ್ನೆ ಐಎಎಸ್​​ ಅಧಿಕಾರಿಗಳ ದುರುಪಯೋಗ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಹಾಗೆಯೇ ವಿಧೇಯಕ ಪ್ರತಿಗಳನ್ನ ಹರಿದು ಸ್ಪೀಕರ್ ಸ್ಥಾನದಲ್ಲಿದ್ದ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮೇಲೆ ಎಸೆದಿದ್ದರು. ನಂತರ ಬಿಜೆಪಿ ಸದಸ್ಯರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಸ್ಪೀಕರ್ ಯು.ಟಿ ಖಾದರ್ ಅವರು10 ಬಿಜೆಪಿ ಶಾಸಕರನ್ನ ಸದನದಿಂದ ಅಮಾನತು ಮಾಡಿದ್ದರು.

Key words: Former CM -HD Kumaraswamy- blamed – behavior – ruling party -incident