Sunday, August 23, 2026

BDA Apartments

Home Front Page ವಿಧಾನಸಭೆ ಕಲಾಪದಲ್ಲಿ ಹೈಡ್ರಾಮಾ: ವಿಧೇಯಕ ಪ್ರತಿಗಳನ್ನ ಹರಿದು ಡೆಪ್ಯೂಟಿ ಸ್ಪೀಕರ್  ಮೇಲೆ ಎಸೆದ ಬಿಜೆಪಿ ಸದಸ್ಯರು.

ವಿಧಾನಸಭೆ ಕಲಾಪದಲ್ಲಿ ಹೈಡ್ರಾಮಾ: ವಿಧೇಯಕ ಪ್ರತಿಗಳನ್ನ ಹರಿದು ಡೆಪ್ಯೂಟಿ ಸ್ಪೀಕರ್  ಮೇಲೆ ಎಸೆದ ಬಿಜೆಪಿ ಸದಸ್ಯರು.

ಬೆಂಗಳೂರು,ಜುಲೈ,19,2023(www.justkannada.in): ಇಂದು ವಿಧಾನಸಭೆ ಕಲಾಪದ ವೇಳೆ ಹೈಡ್ರಾಮಾ ನಡೆದಿದ್ದು ಬಿಜೆಪಿ ಸದಸ್ಯರು ಸದನದ ಭಾವಿಗಿಳಿದು ಪ್ರತಿಭಟಿಸಿ ವಿಧೇಯಕ ಪ್ರತಿಗಳನ್ನ ಹರಿದು ಡೆಪ್ಯೂಟಿ ಸ್ಪೀಕರ್ ಮೇಲೆ ಎಸೆದಿರುವ ಘಟನೆ ನಡೆದಿದೆ.

ರಾಜ್ಯ ಬಜೆಟ್ ಮೇಲಿನ ಚರ್ಚೆಗೆ ವಿರೋಧಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ವಿಧೇಯಕ ಪ್ರತಿಗಳನ್ನ ಹರಿದುಹಾಕಿದ್ದು ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದು ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮೇಲೆ ಪ್ರತಿಯ ಚೂರುಗಳನ್ನ ಎಸೆದಿದ್ದಾರೆ.

ಇದೇ ವೇಳೆ ಬಿಜೆಪಿ ಸದಸ್ಯರ ನಡೆಯನ್ನ ಡಿಸಿಎಂ ಡಿ.ಕೆ ಶಿವಕುಮಾರ್ ವಿಡಿಯೋ ಮಾಡಿಕೊಂಡರು. ಸದನದಲ್ಲಿ ಗಲಾಟೆ ಹಿನ್ನೆಲೆ ಸ್ಪೀಕರ್ ಕಲಾಪವನ್ನ ಮುಂದೂಡಿಕೆ ಮಾಡಿದರು.

Key words:  assembly – BJP -members bill – threw – Deputy Speaker.