Wednesday, August 5, 2026

BDA Apartments

Home Front Page ವರ್ಗಾವಣೆ ದಂಧೆ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದ ಮಾಜಿ ಸಿಎಂ ಹೆಚ್.ಡಿಕೆಗೆ ತಿರುಗೇಟು ನೀಡಿದ ಸಚಿವ...

ವರ್ಗಾವಣೆ ದಂಧೆ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದ ಮಾಜಿ ಸಿಎಂ ಹೆಚ್.ಡಿಕೆಗೆ ತಿರುಗೇಟು ನೀಡಿದ ಸಚಿವ ಚಲುವರಾಯಸ್ವಾಮಿ.

ಬೆಂಗಳೂರು,ಜುಲೈ,13,2023(www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ  ವರ್ಗವಣೆ ದಂಧೆ ಆರೋಪ ಮಾಡಿ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಹೆಚ್.ಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ.  ಹೆಚ್ ಡಿಕೆ ಆರೋಪಗಳಿಗೆಲ್ಲಾ ಸಿಎಂ ಉತ್ತರ ಕೊಡುತ್ತಾರೆ. ಬಹುಶಃ ಹೆಚ್.ಡಿಕೆ ಸಿಎಂ ಆಗಿದ್ದಾಗ ಇದ್ದ ರೇಟ್ ಕಾರ್ಡ್ ಅನ್ಸುತ್ತೆ. ಚೆನ್ನಾಗೇ ಮಾಡಿದ್ದಾರೆ ಅಭಿನಂದನೆ ಸಲ್ಲಿಸಬೇಕು ಎಂದು ಟಾಂಗ್ ನೀಡಿದರು.

ನಾನು ಒಕ್ಕಲಿಗೆ ಎಂಬ ಕಾರಣಕ್ಕೆ ನನ್ನ ವಿರುದ್ದ ಟಾರ್ಗೆಟ್ ಮಾಡಿದ್ದಾರೆ. ನಾನು ಹೆಚ್.ಡಿ ದೇವೇಗೌಡರು ಅವರ ಕುಟಂಬದ ಬಗ್ಗೆ ಮಾತಾಡಿಲ್ಲ. ಹೆಚ್ ಡಿಕೆ ವಿಚಾರ ಎತ್ತಿದ್ರೆ ಸಾಕು ಕುಟುಂಬ ಅಂತಾರೆ. ಕುಮಾರಸ್ವಾಮಿ ಯಾವಾಗಲೂ ಕುಟುಂದ ಜಪ ಮಾಡಬಾರದು. ಅವರು ಹತಾಶರಾಗಿದ್ದಾರೋ ಏನೋ ಗೊತ್ತಿಲ್ಲ.  ಲೋಕಸಭಾ ಚುನಾವಣೆ ಇದೆ.  ಹೀಗಾಗಿ ನನ್ನ ಮಂಡ್ಯ ಅಂತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಕುಟುಕಿದರು.

Key words: Minister- Chaluvarayaswamy – former CM -HDK – transfer scam -rate card.