Sunday, August 23, 2026

BDA Apartments

Home Front Page ಹೆಚ್. ಡಿ ಕುಮಾರಸ್ವಾಮಿ ಅವರೇ ವಿಪಕ್ಷ ನಾಯಕ ಆಗ್ತಾರೆ- ಶಾಸಕ ಲಕ್ಷ್ಮಣ್ ಸವದಿ ಭವಿಷ್ಯ

ಹೆಚ್. ಡಿ ಕುಮಾರಸ್ವಾಮಿ ಅವರೇ ವಿಪಕ್ಷ ನಾಯಕ ಆಗ್ತಾರೆ- ಶಾಸಕ ಲಕ್ಷ್ಮಣ್ ಸವದಿ ಭವಿಷ್ಯ

ಬೆಂಗಳೂರು,ಜುಲೈ,12,2023(www.justkannada.in): ನೋಡ್ತಾ ಇರಿ ವಿಪಕ್ಷ ನಾಯಕ ಸ್ಥಾನ ಜೆಡಿಎಸ್ ಮನೆ ಬಾಗಿಲಿಗೆ ಬರುತ್ತೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರೇ ವಿಪಕ್ಷ ನಾಯಕ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ  ಭವಿಷ್ಯ ನುಡಿದರು.

ಇಂದು ವಿಧಾನಸಭೆ ಕಲಾಪದಲ್ಲಿ  ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆಯಾಯಿತು. ಈ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ, ಬಿಎಸ್ ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಇಳಿಸಿದ್ರು. ಆದರೆ ಅವರನ್ನು ಯಾಕೆ ಇಳಿಸಿದ್ರು ಅನ್ನೋದು ಗೊತ್ತಿಲ್ಲ.‌ ನರೇಂದ್ರ ಮೋದಿಯವರು ಬಿಟ್ರೆ ಯಾರಿಗೂ ಗೊತ್ತಿಲ್ಲ. ಲಕ್ಷ್ಮಣ್ ಸವದಿ ಅವರು ಉಪ ಮುಖ್ಯಮಂತ್ರಿ ಆಗಿದ್ದರು. ಸವದಿ ಅವರೇ ನಿಮಿಗಾದ್ರೂ ಗೊತ್ತಾ..? ಎಂದು ಪ್ರಶ್ನಿಸಿದರು.

ಈ ವೇಳೆ ಜಿ.ಟಿ ದೇವೇಗೌಡರಿಗೆ ತಿರುಗೇಟು ನೀಡಿದ ಶಾಸಕ ಲಕ್ಷ್ಮಣ್ ಸವದಿ, ನನಗೆ ಅಲ್ಲಿನ ಮೇಲಿನವರ ಸಂಪರ್ಕ ಇದೆ. ವಿಪಕ್ಷ ನಾಯಕ ಸ್ಥಾನ ನಿಮ್ಮ ಮನೆ ಬಾಗಿಲಿಗೆ ಬರುವ ಸಾಧ್ಯತೆ ಇದೆ . ರಾಜ್ಯದಲ್ಲಿ  ಬಿಜೆಪಿ ನಾಯಕರು ಕಚ್ಚಾಡುತ್ತಿದ್ದಾರೆ ನೋಡ್ತಾ ಇರಿ ಕುಮಾರಸ್ವಾಮಿ ಅವರರೇ ವಿಪಕ್ಷ ನಾಯಕ ಆಗುತ್ತಾರೆ. ವಿಪಕ್ಷ ನಾಯಕ ಸ್ಥಾನ  ನಿಭಾಯಿಸೋದು ಹೆಚ್.ಡಿ ಕುಮಾರಸ್ವಾಮಿ ಮಾತ್ರ. ಲೋಕಸಭೆ ಚುನಾವಣೆಗೆ ಎಲ್ಲಾ ರೆಡಿಯಾಗುತ್ತಿದೆ ಎಂದು ಹೇಳಿದರು.

Key words: Former CM -H. D Kumaraswamy – Opposition Leader –MLA- Lakshman Savadi