Tuesday, August 4, 2026

BDA Apartments

Home Front Page ಅಮರನಾಥ ಯಾತ್ರಿಗಳ ಸುರಕ್ಷತೆ ಬಗ್ಗೆ ಸದನದಲ್ಲಿ ಮಾಹಿತಿ ನೀಡಿದ ಶಾಸಕ ಹೆಚ.ಸಿ ಬಾಲಕೃಷ್ಣ.

ಅಮರನಾಥ ಯಾತ್ರಿಗಳ ಸುರಕ್ಷತೆ ಬಗ್ಗೆ ಸದನದಲ್ಲಿ ಮಾಹಿತಿ ನೀಡಿದ ಶಾಸಕ ಹೆಚ.ಸಿ ಬಾಲಕೃಷ್ಣ.

ಬೆಂಗಳೂರು,ಜುಲೈ,10,2023(www.justkannada.in): ಅಮರನಾಥ ಯಾತ್ರಿಗಳ ಸುರಕ್ಷತೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಈ ಕುರಿತು ಸದನದಲ್ಲಿ ಶಾಸಕ ಹೆಚ್.ಸಿ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ . ಬುಧವಾರದವರೆಗೂ ಆರ್ಮಿ ಕ್ಯಾಂಪ್​ನಲ್ಲಿ ಇರಲು ಅವಕಾಶವಿದೆ. ಬುಧವಾರ ರಸ್ತೆಯಲ್ಲಿ ಬಿದ್ದಿರುವ ಮಣ್ಣು ತೆರವು ಕಾರ್ಯ ನಡೆಯಲಿದೆ. ರಸ್ತೆ ತೆರವು ಕಾರ್ಯದ ಬಗ್ಗೆ ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಮಾಹಿತಿ ನೀಡಿದರೆ ಯಾತ್ರಾರ್ಥಿಗಳ ಸಂಪರ್ಕಕ್ಕೆ ಪ್ರಯತ್ನ ನಡೆಯುತ್ತದೆ ಎಂದು ತಿಳಿಸಿದರು.

ಹಾಗೆಯೇ ಈಗಾಗಲೇ ನಮ್ಮ ರಾಜ್ಯದ 4 ಅಧಿಕಾರಿಗಳ ತಂಡಗಳನ್ನು ಕಳಿಸಲಾಗಿದೆ ಎಂದು ಸದನದಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಶಾಸಕ ಬಾಲಕೃಷ್ಣ ಮಾಹಿತಿ ನೀಡಿದರು.

Key words: MLA -H.C. Balakrishna- informed -safety –Amarnath- pilgrims