ಕಾವೇರಿ ನದಿಗೆ ಹಾರಿ ಕಿರಿಯ ಸ್ವಾಮೀಜಿ ಆತ್ಮಹತ್ಯೆ.

ಮೈಸೂರು,ಜುಲೈ,10,2023(www.justkannada.in): ಕಾವೇರಿ ನದಿಗೆ ಹಾರಿ ದೇವನೂರು ಮಠದ ಕಿರಿಯ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಮುಡುಕುತೊರೆ ಗ್ರಾಮದಲ್ಲಿ ನಡೆದಿದೆ.

ನಂಜನಗೂಡಿನ ದೇವನೂರು ಮಠದ ಕಿರಿಯ ಸ್ವಾಮೀಜಿ ಶಿವಪ್ಪ ದೇವರು ಆತ್ಮಹತ್ಯೆಗೆ ಶರಣಾದವರು. ಶಿವಪ್ಪ ದೇವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಆನಾರೋಗ್ಯ ಕಾರಣದಿಂದ ಮಾನಸಿಕವಾಗಿ  ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ತಲಕಾಡು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Key words:  Swamiji- committed -suicide – Cauvery river.