Sunday, August 23, 2026

BDA Apartments

Home Front Page ವಿಪಕ್ಷ ನಾಯಕ ಆಯ್ಕೆ ವಿಳಂಬ ವಿಚಾರ: ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ.

ವಿಪಕ್ಷ ನಾಯಕ ಆಯ್ಕೆ ವಿಳಂಬ ವಿಚಾರ: ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ.

ಬೆಂಗಳೂರು,ಜುಲೈ,10,2023(www.justkannada.in): ಅಧಿವೇಶನ ಆರಂಭವಾಗಿ ವಾರ ಕಳೆದರೂ ವಿಪಕ್ಷ ನಾಯಕ ಆಯ್ಕೆಗೆ ವಿಳಂಬ ಧೋರಣೆ ತೋರುತ್ತಿರುವ ಬಿಜೆಪಿ ವಿರುದ್ಧ ಟ್ವಿಟ್ಟರ್ ನಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ವಿರೋಧ ಪಕ್ಷದ ನಾಯಕನಿಲ್ಲದೆ ರಾಜ್ಯಪಾಲರ ಭಾಷಣ ಆಯಿತು. ಬಜೆಟ್ ಮಂಡನೆಯಾಯ್ತು, ಸದನ ಶುರುವಾಗಿ ಒಂದು ವಾರಕ್ಕೂ ಹೆಚ್ಚು ದಿನಗಳಾದವು. ಕರ್ನಾಟಕದ ವಿಧಾನಸಭೆಯ ಭವ್ಯ ಪರಂಪರೆಗೆ ಮೊದಲ ಬಾರಿ ಇಂತಹದ್ದೊಂದು ಕಪ್ಪು ಚುಕ್ಕೆ ಅಂಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಆಡಳಿತ ಪಕ್ಷವಾಗಿ ಮಾತ್ರವಲ್ಲ, ವಿರೋಧ ಪಕ್ಷವಾಗಿಯೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಲ್ಲಿ ಬಿಜೆಪಿ ಸೋತಿದೆ. ವಿಪಕ್ಷ ನಾಯಕನನ್ನು ನೇಮಿಸದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಕರ್ನಾಟಕದ ಜನತೆಗೆ, ಸದನದ ಪಾವಿತ್ರ್ಯತೆಗೆ ಅವಮಾನಕರವಾಗಿ ನಡೆದುಕೊಂಡು ರಾಜಕೀಯ ವ್ಯವಸ್ಥೆಯ ಮೇಲೆ ಜನರಲ್ಲಿ ಅಪನಂಬಿಕೆ ಮೂಡಿಸುತ್ತಿದೆ ಬಿಜೆಪಿ ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.

Key words: Opposition -leader – delay – Minister -Priyank Kharge – BJP