Sunday, August 23, 2026

BDA Apartments

Home Front Page ವಂದೇ ಭಾರತ್ ರೈಲಿಗೆ ಹೊಸ ರೂಪ: ಸಿಕ್ಕಿತು ಕೇಸರಿ ಬಣ್ಣ !

ವಂದೇ ಭಾರತ್ ರೈಲಿಗೆ ಹೊಸ ರೂಪ: ಸಿಕ್ಕಿತು ಕೇಸರಿ ಬಣ್ಣ !

ಬೆಂಗಳೂರು, ಜುಲೈ 09, 2023 (www.justkannada.in): ವಂದೇ ಭಾರತ್ ರೈಲು ಇದೀಗ ಹೊಸ ವಿನ್ಯಾಸದೊಂದಿಗೆ ಹೊರಬರಲಿದೆ.

ಹೌದು. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ವಂದೇ ಭಾರತ್ ರೈಲಿಗೆ ಹೊಸ ರೂಪ ಸಿಗಲಿದೆ.

ವಂದೇ ಭಾರತ್ ರೈಲಿನ ಹೊಸ ನೋಟವನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲಿಸಿದ್ದಾರೆ.

ಅಶ್ವಿನಿ ವೈಷ್ಣವ್ ಅವರು ಚೆನ್ನೈನ ಪೆರಂಬೂರ್ ಲಕ್ಷ್ಮೀಪುರಂ ನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಗೆ ಭೇಟಿ ನೀಡಿ ಹೊಸ ರೈಲನ್ನು ಪರಿಶೀಲಿಸಿದ್ದಾರೆ.

ವಿನ್ಯಾಸದಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದ್ದು, ನೀಲಿ – ಬಿಳಿ ಬಣ್ಣಕ್ಕೆ ಬದಲಾಗಿ ಕೇಸರಿ – ಬಿಳಿ ಬಣ್ಣವನ್ನು ಬಳಿಯಲಾಗಿದೆ. ಇದರ ಫೋಟೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.